ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ 17 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ತಡೆದುಕೊಳ್ಳಲು ಆಗದೇ ಹಿಂದೂ ಧರ್ಮದ ವಿರುದ್ಧ ಕಿಡಿ ಕಾರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಕಡೆಗಾಲ ಬಂದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ KSEshwarappa ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗ್ಯಾರೆಂಟಿ ಹೆಸರಿನಲ್ಲಿ ಬಡವರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ, ಈ ಸರ್ಕಾರ 5 ವರ್ಷ ಅಧಿಕಾರ ನಡೆಸಲ್ಲ ಎಂದು ನಾವು ಆರಂಭದಲ್ಲೇ ಹೇಳಿದ್ದೇವೆ. ನಮ್ಮ ಅಪ್ಪನನ್ನು 5 ವರ್ಷ ಅಧಿಕಾರದಲ್ಲಿ ಉಳಿಸಿಕೊಳ್ಳಲು ಹೋರಾಟ ಮಾಡೋಣ ಎಂದು ಸ್ವಪಕ್ಷೀಯರಿಗೆ ಸಿಎಂ ಮಗ ಯತೀಂದ್ರ ಹೇಳಿರುವುದು ಪೂರಕವಾಗಿದೆ ಕಟಿಕಿಯಾಡಿದರು.
ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಇವರು ಐದು ವರ್ಷ ಅಧಿಕಾರ ಪೂರ್ಣ ಮಾಡಲ್ಲ ಎಂದರು.
Also read: ಸಿದ್ದರಾಮಯ್ಯ, ಯತೀಂದ್ರ ಮುಸ್ಲಿಂ ಆಗಿ, ಪಾಕಿಸ್ಥಾನಕ್ಕೆ ಹೋಗಲಿ: ಈಶ್ವರಪ್ಪ ಚಾಟಿ
ಬಹುಮತ ಪಡೆದ ಪಕ್ಷದ ಮುಖ್ಯಮಂತ್ರಿಯನ್ನು 5 ವರ್ಷ ಅಧಿಕಾರದಲ್ಲಿ ಉಳಿಸಿಕೊಳ್ಳಲು ತಮ್ಮ ಪಕ್ಷದೊಳಗೇ ಹೋರಾಟ ಮಾಡಲು ಸ್ವಪಕ್ಷೀಯರೇ ಕರೆ ನೀಡಿರುವುದು ವಿಪರ್ಯಾಸ ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


