ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾಗಿರುವ ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ವತಿಯಿಂದ ಏಪ್ರಿಲ್ 10, 11 ರಂದು ಮಲ್ಲಿಗೇನಹಳ್ಳಿಯ ಜ್ಞಾನಪಥ ಆವರಣದಲ್ಲಿ ರಾಷ್ಟ್ರಮಟ್ಟದ ವಿಚಾರ ಸಮ್ಮೇಳನ ಏರ್ಪಡಿಸಲಾಗಿದೆ.
ವಿಶ್ವದ ಉದ್ದಕ್ಕೂ ಸಮಕಾಲೀನ ಚರ್ಚೆಗಳಲ್ಲಿ ಪ್ರಧಾನ ವಿಷಯವಾಗಿರುವ ಕೃತಕ ಬುದ್ಧಿಮತ್ತೆ (Artificial Intelligence AI) ಕುರಿತು ಎರಡು ದಿನಗಳ ವಿಚಾರ ಸಮ್ಮೇಳನದಲ್ಲಿ ವಿವಿಧ ಜ್ಞಾನಶಿಸ್ತುಗಳ ದೃಷ್ಟಿಯಲ್ಲಿ AIನ ಪ್ರಯೋಜನಗಳು ಹಾಗೂ ಸವಾಲುಗಳನ್ನು ಕುರಿತು ಅನೇಕ ವಿದ್ವಾಂಸರು ವಿಚಾರ ಮಂಡಿಸಲಿದ್ದಾರೆ.
ಕುವೆಂಪು ವಿಶ್ವವಿದ್ಯಾಲಯದ Kuvempu University ಕುಲಪತಿ ಪ್ರೊ. ಶರತ್ ಅನಂತಮೂರ್ತಿ Sharath Ananthamurthy ಕಾರ್ಯಕ್ರಮ ಉದ್ಘಾಟಿಸಲಿದ್ದು, ಐ.ಐ.ಎಮ್ ಬೆಂಗಳೂರು ಸಂಸ್ಥೆಯ communication & management ವಿಭಾಗದ ಡಾ. ದೀಪ್ತಿ ಗಣಪತಿ ದಿಕ್ಸೂಚಿ ಭಾಷಣ ನೀಡಲಿದ್ದಾರೆ.
ಪ್ರಧಾನ ಚರ್ಚಾಗೋಷ್ಠಿಯಲ್ಲಿ ಬೆಳಗಾವಿ ವಿಶ್ವವಿದ್ಯಾಲಯದ ಪ್ರೊ. ಅಶೋಕ ಡಿಸೋಜಾ, ಪ್ರಸಿದ್ಧ ವೈಧ್ಯರಾದ ಡಾ. ಶ್ರೀಕಾಂತ ಹೆಗ್ಡೆ, ಕುವೆಂಪು ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ಪ್ರಾಧ್ಯಾಪಕರು, ಹಿರಿಯ ವಿದ್ವಾಂಸರಾದ ಪ್ರೊ. ಕುಮಾರಸ್ವಾಮಿ ಮತ್ತು ಪ್ರಸಿದ್ಧ ಮನೋವೈದ್ಯೆ ಡಾ. ಪ್ರೀತಿ ವಿ ಶಾನಭಾಗ್ ಅವರು ಭಾಗವಹಿಸಲಿದ್ದಾರೆ.
ವಿಶೇಷ ಉಪನ್ಯಾಸಗಳ ಸರಣಿಯಲ್ಲಿ ಅಮೇರಿಕದ Google ಸಂಸ್ಥೆಯ ಹಿರಿಯ ನಿರ್ದೇಶಕರಾದ ಡಾ. ಮಹೇಶ್ ಕಲ್ಲಹಳ್ಳ, KREA ವಿಶ್ವವಿದ್ಯಾಲಯದ ಪ್ರೊ. ಪೃಥ್ವಿದತ್ತ ಚಂದ್ರ ಶೋಭಿ, NIMHANS, ಬೆಂಗಳೂರು ಸಂಸ್ಥೆಯ ಡಾ. ಅಜಯ್ ಗೋಯಲ್ St. Johns ಸಂಸ್ಥೆಯ ಸಂಶೋಧಕರಾದ ಡಾ. ಕಿಶೋರ್ ಗೋವಿಂದ್ ಹಾಗೂ ಬೆಂಗಳೂರಿನ ಶ್ರೀ ಶ್ರೀ ನರ್ಸಿಂಗ್ ಇನ್ಸ್‌ಟಿಟ್ಯೂಟ್‌ನ ಡಾ. ಶೀಲಾ ಜೆ ಇವರು ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ.
11 ರ ಸಾಯಂಕಾಲ 4ಗಂಟೆಗೆ ಕನ್ನಡದಲ್ಲಿ ಮೊದಲ ವೆಬ್‌ಸೈಟ್ ಹೊರತಂದ, ಕಂಪ್ಯೂಟರ್ ಸೈನ್ಸ್ ತಜ್ಞರಾದ ಡಾ. ಉಬರಡ್ಕ ಬೆಳ್ಳಿಪ್ಪಾಡಿ ಪವನಜರವರು, ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರಿನ ಶೋಮು ಕನ್ಸಲ್ಟಿಂಗ್ ಸರ್ವೀಸಸ್ ನ ಮುರಳೀಧರ H N ರವರು ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ವಿಚಾರ ಸಮ್ಮೇಳನದ ಉಧ್ಘಾಟನೆ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ. ರಜನಿ ಎ. ಪೈ, ಡಾ. ವಾಮನ್ ಶಾನ್‌ಭಾಗ್, ಡಾ. ಪ್ರೀತಿ ವಿ ಶಾನ್‌ಭಾಗ್ ಹಾಗೂ ಆಡಳಿತಾಧಿಕಾರಿಗಳಾದ ಪ್ರೊ. ರಾಮಚಂದ್ರ ಬಾಳಿಗಾ ಭಾಗವಹಿಸಲಿದ್ದಾರೆ. ಎರಡೂ ದಿನಗಳ ವಿಚಾರ ಸಮ್ಮೇಳನವು ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ರಾಜೇಂದ್ರ ಚೆನ್ನಿಯವರ ಮುಖ್ಯ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಕಾಲೇಜಿನ ಮನ:ಶಾಸ್ತ್ರ ವಿಭಾಗದ ಡಾ. ಅರ್ಚನಾ ಭಟ್ ಮುಖ್ಯ ಸಂಯೋಜಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈಗಾಗಲೇ 150ಕ್ಕೂ ಹೆಚ್ಚು ಜನ ಸಮ್ಮೇಳನದಲ್ಲಿ ಹಾಜರಾಗಿ ಪ್ರಬಂಧ ಮಂಡಿಸಲು ಹೆಸರನ್ನು ನೋಂದಾಯಿಸಿದ್ದಾರೆ. ಇನ್ನೂ ಅನೇಕರು ಆನ್‌ಲೈನ್ ಪ್ರಬಂಧ ಮಂಡನೆ ಮಾಡಲಿದ್ದಾರೆ. ವಿಚಾರ ಸಮ್ಮೇಳನದ ವಿಷಯವು “Artificial Intelligence, Inter-Disciplinarity and The Future of Higher Education“ (ಕೃತಕ ಬುದ್ಧಿಮತ್ತೆ, ಅಂತರ್ ಶಿಸ್ತೀಯತೆ ಮತ್ತು ಉನ್ನತ ಶಿಕ್ಷಣದ ಭವಿಷ್ಯ) ಆಗಿರುತ್ತದೆ.
ಎರಡೂ ದಿನಗಳು ಬೆಳ್ಳಿಗೆ 10 ಗಂಟೆಯಿಂದ ವಿಚಾರ ಸಮ್ಮೇಳನವು ನಡೆಯುತ್ತದೆ. ಆದುದಂದ ಅತ್ಯಂತ ಮಹತ್ವಪೂರ್ಣವಾದ ವಿಷಯದ ಬಗ್ಗೆ ಚರ್ಚೆಯಲ್ಲಿ ಎಲ್ಲಾ ಆಸಕ್ತರು ಭಾಗವಹಿಸಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಕೆ ರವರು ಕೋರಿದ್ದಾರೆ. ಎರಡು ದಿನಗಳ ಸಮ್ಮೇಳನವು kapmi official youtube channel ನಲ್ಲಿ ಪ್ರಸಾರವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















