ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಜಿ ಪೌಂಡೇಷನ್ Sarji Foundation ಪ್ರಾಯೋಜಕತ್ವ ಹಾಗೂ ಶಿವಮೊಗ್ಗ, ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರ ನೇತೃತ್ವದಲ್ಲಿ ವನಮಹೋತ್ಸದ ಹಾಗೂ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಜೂನ್ 7ರಂದು ಹಮಿಕೊಳ್ಳಲಾಗಿದೆ ಎಂದು ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಧನಂಜಯ ಸರ್ಜಿ ತಿಳಿಸಿದರು.
ಅವರು ಶನಿವಾರ ಬೆಳಗ್ಗೆ ಸರ್ಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೂ. 7ರ ಮಂಗಳವಾರ ಬೆಳಗ್ಗೆ 9:30ಕ್ಕೆ ಪದ್ಮಶ್ರೀ ಪ್ರರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರು ಸಾಗರ ರಸ್ತೆಯ ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಡಿಎಫ್ ಓ. ಶಂಕರ, ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮಿಜಿಯವರು ಸೇಂಟ್ ಜೋಸೆಫ್ ಅಕ್ಷರಧಾಮ ಶಾಲೆಯ ಪ್ರಾಂಶುಪಾಲರಾದ ಫಾದರ್ ನಿಕ್ಸನ, ಸೇಂಟ್ ಥಾಮಸ ಸ್ಕೂಲ್ ಪ್ರಾಂಶುಪಾಲರಾದ ಫಾದರ ವಿನ್ನೆಂಟ್, ಸರ್ಜಿ ಫೌಂಡೇಷನ ಮ್ಯಾನೇಜಿಂಗ್ ಟ್ರಸ್ಟಿ ಡಾ. ಧನಂಜಯ ಸರ್ಜಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸೇಂಟ್ ಜೋಸೆಫ್ ಶಾಲೆಯ ಸಾವಿರ ಮಕ್ಕಳಿಗೆ ಸಸ್ಯ ಪೋಷಣಾ ಅಭಿಯಾನವನ್ನೂ ಸಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆಯನ್ನು ವಿಭಿನ್ನ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ನಗರದ ವಿವಿಧ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಭೂಮಿ ರಕ್ಷಣೆ ನಮ್ಮ ಹೊಣೆ ಎಂಬ ವಿಷಯ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಗಿದ್ದು, ನಗರದ ವಿವಿಧ 15 ಶಾಲೆಗಳಿಂದ 2,200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. 5,6,7 ನೇ ತರಗತಿ ಮಕ್ಕಳಿಗೆ ಪ್ರಥಮ( 7,500), ದ್ವಿತೀಯ (5,500), ತೃತೀಯ (2,500) ನಗದು ಬಹುಮಾನಗಳನ್ನು ಹಾಗೂ ಪ್ರಶಸ್ತಿ ಪತ್ರದೊಂದಿಗೆ ನೀಡಲಾಗುತ್ತಿದೆ ಹಾಗೂ 8,9, 10 ನೇ ತರಗತಿ ಮಕ್ಕಳಿಗೆ (10,000), ದ್ವಿತೀಯ (6,000), ತೃತೀಯ (3,000) ನಗದು ಬಹುಮಾನಗಳನ್ನು ಹಾಗೂ ಪ್ರಶಸ್ತಿ ಪತ್ರ ದೊಂದಿಗೆ ನೀಡಲಾಗುತ್ತಿದೆ ಹಾಗೂ ಸಮಾಧಾನಕರ ಬಹುಮಾನಗಳನ್ನೂ ಸಹ ನೀಡಲಾಗುತ್ತಿದೆ. ಇದು ನಿಜಕ್ಕೂ ಮಕ್ಕಳಿಗೆ ಪರಿಸರದ ಬಗ್ಗೆ ಇರುವ ಕಾಳಜಿಯನ್ನು ಬಿಂಬಿಸುತ್ತದೆ.
Also read: ಕತ್ತಲಲ್ಲಿ ಕಾವಲಿಗೆ ನಿಂತು ರಾಜ್ಯಕ್ಕೇ ಮಾದರಿಯಾದ ಉತ್ತರ ಕನ್ನಡ ಮಹಿಳಾ ಪೊಲೀಸರು
ಇದೇ ರೀತಿ ನಗರದ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಸ ತ್ಯಾಜ್ಯ ನಿರ್ವಹಣೆ, ವಿಲೇವಾರಿ ಹಾಗೂ ಚರಂಡಿ ಸ್ವಚ್ಛತೆಯಲ್ಲಿ ಸಮುದಾಯದ ಪಾತ್ರ ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು, ಈ ಸ್ಪರ್ಧೆಯಲ್ಲಿ 138ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಅತ್ಯಂತ ಅರ್ಥಪೂರ್ಣವಾಗಿ ಪ್ರಬಂಧಗಳನ್ನು ಬರೆದು ಕಳಿಸಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂದ ಪ್ರಬಂಧಗಳು ಹಾಗೂ ಕಲಾ ಚಿತ್ರಗಳನ್ನು ಆಯ್ಕೆ ಮಾಡುವುದೇ ಒಂದು ಸವಾಲಾಗಿತ್ತು. ಅತ್ಯಂತ ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದ್ದು, ಪ್ರಥಮ (10,000), ದ್ವಿತೀಯ (6,000), ತೃತೀಯ (3,000) ನಗದು ಬಹುಮಾನಗಳನ್ನು ಹಾಗೂ ಪ್ರಶಸ್ತಿ ಪತ್ರದೊಂದಿಗೆ ನೀಡಲಾಗುತ್ತಿದೆ ಹಾಗೂ ಸಮಾಧಾನಕರ ಬಹುಮಾನಗಳನ್ನೂ ಸಹ ನೀಡಲಾಗುತ್ತಿದೆ ಎಂದರು.
ಪ್ರಬಂಧ ಸ್ಪರ್ಧೆ ವಿಜೇತರ ವಿವರ:
ಪ್ರಥಮ ಬಹುಮಾನ : ಡಿವಿಎಸ್ ವಿಜ್ಞಾನ ಕಾಲೇಜಿನ ಮೇಘನಾ ಟಿ.ಎನ್. ( 10 ಸಾವಿರ ರೂ.ನಗದು ಬಹುಮಾನ).
ದ್ವಿತೀಯ ಬಹುಮಾನ : ಕಮಲಾ ನೆಹರೂ ಮಹಿಳಾ ಕಾಲೇಜು, ಪವಿತ್ರ ಎಸ್. (6000 ನಗದು ಬಹುಮಾನ).
ತೃತೀಯ ಬಹುಮಾನ : ಎಟಿಎನ್‌ಸಿಸಿ ಕಾಲೇಜಿನ ಶಾಲಿನಿ ಎಸ್.( 3000 ರೂ.ನಗದು ಬಹುಮಾನ )
ಚಿತ್ರಕಲಾ ಸ್ಪರ್ಧೆಯ ವಿಜೇತರು, 5,6,7ನೇ ತರಗತಿ ವಿಭಾಗ :
ಪ್ರಥಮ ಬಹುಮಾನ : ನ್ಯಾಷನಲ್ ಪಬ್ಲಿಕ್ ಸ್ಕೂಲ್, ನಿತೀಶ್. ವಿ. (6000 ನಗದು ಬಹುಮಾನ).
ದ್ವಿತೀಯ ಬಹುಮಾನ : ಸೇಂಟ್ ಜಾನ್ಸ್ ಸ್ಕೂಲ್, ತೇಜಸ್. ಪಿ.ಎಚ್..( 3000 ರೂ.ನಗದು ಬಹುಮಾನ )
ತೃತೀಯ ಬಹುಮಾನ : ಡಿವಿಎಸ್ ಸ್ಕೂಲ್, ನೂರ್ ಹನಿಫಾ ( 3000 ರೂ.ನಗದು ಬಹುಮಾನ )
ಚಿತ್ರಕಲಾ ಸ್ಪರ್ಧೆಯ ವಿಜೇತರು, ಪ್ರೌಢ ಶಾಲಾ ವಿಭಾಗ :
ಪ್ರಥಮ ಬಹುಮಾನ : ಆದಿಚುಂಚನಗಿರಿ ಶಾಲೆ, ನಿಖಿಲ್,
ದ್ವಿತೀಯ ಬಹುಮಾನ : ಚೇಂಟ್ ಜೋಷಫ್ ಅಕ್ಷರಧಾಮ, ಸುಪ್ರಿತಾ ಎನ್.
ತೃತೀಯ ಬಹುಮಾನ : ಜೈನ್ ಪಬ್ಲಿಕ್ ಸ್ಕೂಲ್, ಕೆ.ಎನ್. ವಿನೀತ್ ರಾವ್.
ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಕಾಳಜಿ ಹಾಗೂ ಭೂಮಿ ರಕ್ಷಣೆ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಹಾಗೂ ಪ್ರೇರಣೆ ಆಗಲಿ ಎಂಬ ಸದುದ್ದೇಶದಿಂದ ಸಾಲುಮರದ ತಿಮ್ಮಕ್ಕ ಅವರಿಂದಲೇ ಮಕ್ಕಳಿಗೆ ಬಹುಮಾನ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೇಂಟ್ ಜೋಸೆಫ ಅಕ್ಷರಧಾಮ ಶಾಲೆಯ ಪ್ರಾಂಶುಪಾಲರಾದ ಫಾದರ್ ನಿಕ್ಸನ, ಸೇಂಟ್ ಥಾಮಸ್ ಸ್ಕೂಲ್ ಪ್ರಾಂಶುಪಾಲರಾದ ಫಾದರ್ ವಿನ್ಸೆಂಟ್, ಟ್ರಸ್ಟಿಗಳಾದ ನಮಿತಾ ಸರ್ಜಿ ಹಾಗೂ ಕೆ.ಅರ್. ಪುರುಷೋತ್ತಮ ಮತ್ತಿತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post