ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭ್ರಷ್ಟಾಚಾರದ ವಿರುದ್ದ ಧ್ವನಿ ಆಗಿದ್ದ ಹೋರಾಟಗಾರ ಅಶೋಕ್ ಯಾದವ್ ಅವರ ದೇಹವನ್ನು ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿಗೆ ಇಂದು ಹಸ್ತಾಂತರಿಸಲಾಯಿತು.
ಸಿಮ್ಸ್ ಕಾಲೇಜಿನ ಪರವಾಗಿ ವೈದ್ಯಾಧಿಕಾರಿ ಡಾ. ಶ್ರೀಧರ್ ದೇಹವನ್ನು ಸ್ವೀಕರಿಸಿ ಮಾತನಾಡಿ, ಅಶೋಕ್ ಯಾದವ್ ಅವರ ಜೀವನ ಯುವ ಜನಾಂಗಕ್ಕೆ ಮಾದರಿ ಆಗಿದೆ ಎಂದರು.
ಸಾಮಾಜಿಕ ಚಿಂತನೆಯಾಂದಿಗೆ ಸಾರ್ಥಕ ಬದುಕು ಕಂಡ ಅಶೋಕ್ ಯಾದವ್ ಅವರ ದೇಹ ವೈದ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಮೂಲಕ ಅವರ ಬದುಕು ಸಮಾಜಕ್ಕೆ ಮಾದರಿ ಆಯಿತು.
Also read: ಚಳ್ಳಕೆರೆ: ಆ.20ರಂದು ಅದ್ಧೂರಿ ಶ್ರೀಕೃಷ್ಣ ಜಯಂತೋತ್ಸವ ಆಚರಣೆ
ಈ ಸಂದರ್ಭದಲ್ಲಿ ಅಶೋಕ್ ಯಾದವ್ ಅವರ ಪತ್ನಿ ವಿಜಯಲಕ್ಷ್ಮಿ, ಮಕ್ಕಳಾದ ಅಮಿತ್ ಮತ್ತು ಶಮಿತ್ ಸೇರಿದಂತೆ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕೆ.ವಿ. ವಸಂತ ಕುಮಾರ್, ಡಾ. ಸತೀಶ್ ಕುಮಾರ್ ಶೆಟ್ಟಿ , ಎಸ್.ಬಿ. ಅಶೋಕ್ ಕುಮಾರ್, ಅಣ್ಣಾ ಹಜಾರೆ ಹೂರಾಟ ಸಮಿತಿಯ ಶಿವಕುಮಾರ್ ಕಸಟ್ಟಿ, ವೆಂಕಟನಾರಾಯಣ, ಸುಬ್ರಹ್ಮಣ್ಯ, ಶ್ರೀಕಾಂತ, ರಾಜು ಮುಂತಾದ ನೂರಾರು ಕಾರ್ಯಕರ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post