ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ #ATNCC ಬಿಕಾಂ ಮತ್ತು ಬಿಬಿಎ ವಿಭಾಗದ ವಿದ್ಯಾರ್ಥಿಗಳು, ಕುವೆಂಪು ವಿಶ್ವವಿದ್ಯಾಲಯದ #KuvempuUniversity 2024ನೇ ಸಾಲಿನಲ್ಲಿ ವಿವಿಧ ರ‍್ಯಾಂಕ್‌ಗಳನ್ನು ಪಡೆದಿದ್ದಾರೆ.
ಬಿಬಿಎ ವಿಭಾಗದಲ್ಲಿ ವಿದ್ಯಾರ್ಥಿನಿ ತನುಶ್ರೀ.ಜೆ (ಪ್ರಥಮ) ರ‍್ಯಾಂಕ್ ಪಡೆದಿದ್ದು, ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬಿ.ಬಿ ಆಯಿಶಾ (ಆರನೇ) ರ‍್ಯಾಂಕ್ ಪಡೆದಿದ್ದಾರೆ.
Also Read>> ಮಮತಾ ರಾಜೀನಾಮೆ ನೀಡದಿದ್ದರೆ ವಜಾಗೊಳಿಸಿ | ಹಿಮಂತ್ ಬಿಸ್ವಾ ಶರ್ಮಾ ಆಕ್ರೋಶ
ಬಿಕಾಂ ವಿಭಾಗದಲ್ಲಿ ಪ್ರಾಚಿ ಜೈನ್ (ದ್ವಿತೀಯ), ಜಿ.ಎಂ.ವೈಷ್ಣವಿ (ಏಳನೇ), ಭರತ್.ಎಸ್.ಎನ್ (ಎಂಟನೇ) ರ‍್ಯಾಂಕ್ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಮಮತಾ.ಪಿ.ಆರ್, ವಿಶೇಷ ಕರ್ತವ್ಯಾಧಿಕಾರಿ ಡಾ.ಆರ್.ಎಂ.ಜಗದೀಶ್ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಎನ್‌ಇಎಸ್ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news























