ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೂಳೆಬೈಲಿನ ಕಸಾಯಿ ಖಾನೆಯೊಂದರ ಮೇಲೆ ತುಂಗಾ ನಗರ ಪೊಲೀಸರು ದಾಳಿ ನಡೆಸಿ 8 ಗೋವುಗಳನ್ನು ರಕ್ಷಿಸಿದ್ದಾರೆ. ಹಾಗೂ 7 ಗೋವುಗಳನ್ನು ಕತ್ತು ಸೀಳಿ ದಾರಣ ಹತ್ಯೆ ಮಾಡಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸೂಳೆಬೈಲಿನ ಅಜೀಜ್ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ 7 ಹಸುಗಳನ್ನ ದಾರುಣವಾಗಿ ಹತ್ಯೆ ಮಾಡಲಾಗಿದ್ದು ಉಳಿದ 8 ಗೋವುಗಳನ್ನ ಸಂರಕ್ಷಿಸಲಾಗಿದೆ. ಈ ವೇಳೆ ಅಜೀಜ್ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.
ಗೋವುಗಳ ಹತ್ಯೆಗೆ ಸಂಬಂಧಪಟ್ಟಂತೆ ಗೋವುಗಳು ರಕ್ತದ ಮಡುವಿನಲ್ಲಿ ಮಲಗಿರುವ ವೀಡಿಯೋ ದೃಶ್ಯವಳಿಗಳು ಲಭ್ಯವಾಗಿದ್ದು, ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ತುಂಗಾನಗರ ಪೊಲೀಸ್ ಇನ್ ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿದೆ. ಗೋಮಾಂಸ ಮಾರಾಟಕ್ಕಾಗಿ ಗೋವುಗಳನ್ನು ಹತ್ಯೆ ಮಾಡಿರುವುದಾಗಿ ಪ್ರಾಥಮಿಕ ತನಿಖೆ ವೇಳಿ ತಿಳಿದುಬಂದಿದೆ.
Also read: ಉದ್ಘಾಟನೆಗೆ ಸಿದ್ಧವಾಗಿದ್ದ ವಂದೇ ಮಾತರಂ ರೈಲಿಗೆ ಕಲ್ಲು: ಮೂವರ ಬಂಧನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post