ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹತ್ಯೆ ಯತ್ನ(307) ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲು ತೆರಳಿದ ವೇಳೆ ಆತ ಪೊಲೀಸರ ಮೇಲೆಯೇ ದಾಳಿಗೆ ಮುಂದಾದ ಹಿನ್ನೆಲೆಯಲ್ಲಿ ಆತನ ಕಾಲಿಗೆ ಎರಡು ಬಾರಿ ಗುಂಡು ಹಾರಿಸಿರುವ ಘಟನೆ ನಗರದಲ್ಲಿ ನಡೆದಿದೆ.
307 ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಫಾರು ಎಂಬಾತ ಮಲ್ಲಿಗೇನಹಳ್ಳಿಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ತುಂಗಾನಗರ ಠಾಣೆ ಅಧಿಕಾರಿಗಳ ತಂಡ ಆತನನ್ನು ಬಂಧಿಸಲು ತೆರಳಿತ್ತು.
ಆದರೆ, ಆತನನ್ನು ಬಂಧಿಸುವ ವೇಳೆ ಆರೋಪಿ ತಿರುಗಿಬಿದ್ದು ಪೊಲೀಸ್ ಸಿಬ್ಬಂದಿ ನಾಗಪ್ಪ ಎನ್ನುವವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿ ಸತ್ಯನಾರಾಯಣ ಅವರು ಆರೋಪಿ ಕಾಲಿಗೆ ಎರಡು ಬಾರಿ ಗುಂಡು ಹಾರಿಸಿದ್ದಾರೆ. ಸದ್ಯ ಆತನಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಏನಿದು ಪ್ರಕರಣ?
ಕಳೆದ ವಾರ ಟಿಪ್ಪುನಗರದಲ್ಲಿ ನಾಸೀರ್, ಮೊಹ್ಮದ್ ತಂಜೀಮ್ ಮತ್ತು ಅಫ್ತಾಬ್ ಎಂಬುವರ ನಡುವೆ ಗಲಾಟೆಯಾಗಿತ್ತು. ಈ ವೇಳೆ ಫರ್ವೇಜ್ ಅಲಿಯಸ್ ಫಾರು ಎಂಬಾತನು ತನ್ನ ನಾಲ್ಕೈದು ಜನ ಸ್ನೇಹಿತರೊಂದಿಗೆ ಬಂದು ಡ್ರಾ ನಿಂದ ತಂಜೀಮ್ ಗೆ ಮೂರು ಕಡೆ ಇರಿದಿದ್ದ.
ತಂಜೀಮ್ ಮೇಲೆ ಆಯುಧದಿಂದ ಅಟ್ಯಾಕ್ ಮಾಡಿ ಪರಾರಿಯಾಗಿದ್ದ ಫಾರು ಮೇಲೆ ತುಂಗ ನಗರ ಪೊಲೀಸ್ ಠಾಣೆಯಲ್ಲಿ 307 ದಾಖಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















