ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಸರ್ಕಾರಕ್ಕೆ ಇಡಿ ದಾಳಿ #ED Raid ನಡೆಸುವುದು ಒಂದು ಚಟವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ #Minister Madhu Bangarappa ಹೇಳಿದ್ದಾರೆ.
ಮೂಡ ಹಗರಣದ ವಿಚಾರದಲ್ಲಿ ಬಿಜೆಪಿಯವರು ಹೋರಾಟ ಮಾಡಿದರೆ ಮಾಡಿಕೊಳ್ಳಲಿ ಆದರೆ ಕಾನೂನಿನ ದುರುಪಯೋಗವಾಗಬಾರದು. ಇಡಿ ದಾಳಿಯನ್ನು ಎರಡು ರೀತಿಯಲ್ಲಿ ನೋಡಬೇಕು. ಒಂದು ಕಾನೂನು ರೀತಿಯಲ್ಲಿ ಆದರೆ ಸರಿ, ಆದರೆ ಬೇಕೆಂದೇ ದಾಳಿ ನಡೆಸುವುದು ವಿರೋಧ ಪಕ್ಷದವರನ್ನು ಹೆದುರಿಸುವುದಕ್ಕಾಗಿ ಈ ದಾಳಿ ನಡೆಸಿದರೆ ಇದು ಕಾನೂನಿನ ದುರುಪಯೋಗ ಕೇಂದ್ರ ಸರ್ಕರಕ್ಕೆ ದಾಳಿ ನಡೆಸಿ ಹೆದರಿಸುವುದು ಒಂದು ಚಟವಾಗಿದೆ. ಆದರೆ ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಗೆ ಬಹುಮತ ಇಲ್ಲದ ಕಾರಣ ಮೊದಲಿನ ಹಾಗೆ ದಾಳಿ ನಡೆಸುವುದು ಸ್ವಲ್ಪ ಕಷ್ಟವಾಗಬಹುದು ಎಂದರು.
Also read: ನಾಳೆ ಅನಂತ್ ಅಂಬಾನಿ ವಿವಾಹ | ಯಾರಿಗೆಲ್ಲಾ ಆಹ್ವಾನ? ಮೆನುವಿನಲ್ಲಿದೆ ಈ ವಿಶೇಷ ಚಾಟ್!
ಅಧಿಕಾರಿಗಳ ವರ್ಗಾವಣೆ ದಂಧೆ ಇದೆ ಎಂದು ಬಸವರಾಯ ರೆಡ್ಡಿ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಹಾಗೆ ಹೇಳಿಲ್ಲ, ಅವರು ಮಾತನಾಡುವಾಗ ನಾನು ಪಕ್ಕದಲ್ಲೇ ಇದ್ದೆ. ದಂಧೆ ನಡೆದರೆ ನಿಲ್ಲಬೇಕು, ವರ್ಗಾವಣೆ ದಂಧೆವಾಗಬಾರದು ಎಂದಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post