ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರಿನ ಯಶವಂತಪುರ ಹಾಗೂ ಶಿವಮೊಗ್ಗ ನಡುವೆ ಪ್ರತಿನಿತ್ಯ ಸಂಚರಿಸುವ ಇಂಟರ್’ಸಿಟಿ ರೈಲಿಗೆ #Intercity Train ಚಿಕ್ಕಬಾಣಾವರದಲ್ಲಿ ನೀಡಲಾಗುತ್ತಿರುವ ತಾತ್ಕಾಲಿಕ ನಿಲುಗಡೆಯನ್ನು ಜೂನ್ ತಿಂಗಳವರೆಗೂ ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಪ್ರಕಟಣೆ ಹೊರಡಿಸಿದ್ದು, ಯಶವಂತಪುರ ಹಾಗೂ ಶಿವಮೊಗ್ಗ ನಡುವೆ ಸಂಚರಿಸುವ 16579/16580 ಸಂಖ್ಯೆಯ ಇಂಟರ್’ಸಿಟಿ ರೈಲನ್ನು ಚಿಕ್ಕಬಾಣಾವರದಲ್ಲಿ ಮೂರು ತಿಂಗಳ ಅವಧಿಗೆ ತಾತ್ಕಾಲಿಕ ನಿಲುಗಡೆ ನೀಡಲು ನಿರ್ಧರಿಸಲಾಗಿದೆ.
ಅಂದರೆ, ಮಾರ್ಚ್ 16 ರಿಂದ ಜೂನ್ 15ರವರೆಗೂ ತಾತ್ಕಾಲಿಕ ನಿಲುಗಡೆಯನ್ನು ವಿಸ್ತರಣೆ ಮಾಡಲಾಗಿದೆ.
Also read: ಎರಡು ಖಾಸಗಿ ಬಸ್‌ಗಳ ನಡುವೆ ಅಪಘಾತ | ಓರ್ವ ಸಾವು, 15ಕ್ಕೂ ಹೆಚ್ಚು ಜನರಿಗೆ ಗಾಯ
ಮೆಮು ರೈಲು ತಾತ್ಕಾಲಿಕ ನಿಲುಗಡೆ ವಿಸ್ತರಣೆ
ಇನ್ನು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಮತ್ತು ಅಶೋಕಪುರಂ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಮೆಮು ವಿಶೇಷ ರೈಲುಗಳಿಗೆ (ರೈ.ಸಂ. 06525/06526) ನಾಯಂಡಹಳ್ಳಿ ನಿಲ್ದಾಣದಲ್ಲಿದ್ದ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆಯನ್ನು ಮಾರ್ಚ್ 21, 2025 ರಿಂದ ಮುಂದಿನ ಸೂಚನೆ ಬರುವವರೆಗೂ ಮುಂದುವರಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post