ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರ ಹಾಗೂ ಗ್ರಾಮಾಂತರದ ವ್ಯಾಪ್ತಿಯಲ್ಲಿ ಜ.21 ಹಾಗೂ 22ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಜನವರಿ 21ರಂದು ಎಲ್ಲೆಲ್ಲಿ ವ್ಯತ್ಯಯ?
ಶಿವಮೊಗ್ಗ ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ಜ.21 ರಂದು ಬೆಳಗ್ಗೆ 9.30 ರಿಂದ ಸಂಜೆ 6.00 ರವರೆಗೆ ಮಾಚೇನಹಳ್ಳಿ, ಬಿದರೆ, ಬಿದರೆ ಗೇಟ್, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಜನತಾ ಕಾಲೋನಿ, ಶಿವಣ್ಣ ಕ್ಯಾಂಪ್, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಹೊನ್ನವಿಲೆ, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆಎಸ್’ಆರ್’ಪಿ ಕಾಲೋನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜನವರಿ 22ರಂದು ಎಲ್ಲೆಲ್ಲಿ ವ್ಯತ್ಯಯ?
ಶಿವಮೊಗ್ಗ ನಗರ ಉಪವಿಭಾಗ-1ರ ಘಟಕ 2 ರ ವ್ಯಾಪ್ತಿಯಲ್ಲಿ ಜ. 22 ರಂದು ಬೆಳಗ್ಗೆ 10.00 ರಿಂದ ಮ 2.00 ರವರೆಗೆ ವೀರಭದ್ರೇಶ್ವರ ಟಾಕೀಸ್ ನಿಂದ ಡಿವಿಎಸ್ ಕಾಲೇಜುವರೆಗೆ ವಿದ್ಯುತ್ ಕಂಬ ತೆರವು ಕಾಮಗಾರಿ ಹಮ್ಮಿಕೊಂಡಿದ್ದು, ಸರ್ ಎಂ.ವಿ.ರಸ್ತೆ, ಲೂರ್ದುನಗರ, ಕಾನ್ವೆಂಟ್ ರಸ್ತೆ, ವೀರಭದ್ರೇಶ್ವರ ಟಾಕೀಸ್ ಹತ್ತಿರ, ಬಿಎಚ್ ರಸ್ತೆ, ಗಾಂಧಿ ಪಾರ್ಕ್ ಮತ್ತು ಮಹಾನಗರ ಪಾಲಿಕೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















