ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದುರ್ಗಿಗುಡಿಯ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವ ಭೌಮರ 354ನೇ ಆರಾಧನಾ ಮಹೋತ್ಸವವು #Shri Raghavendra Swamy Aradhana Mahothsava ವಿಶೇಷವಾಗಿ ಆಗಸ್ಟ್ 10 ರಿಂದ 12ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಆ.10ರಂದು ಭಾನುವಾರ ಪೂರ್ವಾರಾಧನೆ, ಆ.11ರ ಸೋಮವಾರ ಶ್ರೀಗುರುಗಳ ಪುಣ್ಯದಿನ, ಆ.12ರ ಮಂಗಳವಾರದಂದು ಬೆಳಿಗ್ಗೆ 11ಕ್ಕೆ ಮಹಾ ರಥೋತ್ಸವ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ವಿಶೇಷ ಅಭಿಷೇಕ, ಸರ್ವಸೇವೆ, ಪೂಜೆ ಹಾಗೂ ಸಂಜೆ ರಜತ ರಥೋತ್ಸವ, ಉಯ್ಯಾಲೆ ಸೇವೆ ಜೊತೆಗೆ ಪ್ರಸಾದ ವಿನಿಯೋಗ ಇರುತ್ತದೆ.
ಆ.8ರ ಶುಕ್ರವಾರ ಸಂಜೆ ಧ್ವಜಾರೋಹಣ, ಗೋಪೂಜೆ, ಲಕ್ಷ್ಮೀ ಪೂಜೆ ಹಾಗೂ ಧಾನ್ಯಪೂಜೆ ಇರುತ್ತದೆ. ಆ.9ರ ಶನಿವಾರ ಬೆಳಿಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮವು ಇರುತ್ತದೆ. ಈ ಬಾರಿ ಶ್ರೀಗುರುಗಳ ಆರಾಧನಾ ಸಂದರ್ಭದಲ್ಲಿ ತಮ್ಮ ವಿಶಿಷ್ಟ ಸೇವಾ ಕಾರ್ಯಗಳಿಂದ ಉಪಯುಕ್ತ ಸೇವೆಗಳನ್ನು ಕೊಟ್ಟಿರುವ ಖ್ಯಾತ ವಿದ್ವಾಂಸರು, ಕ್ರೀಯಾಶೀಲ ಸ್ವಯಂಸೇವಕರಾದ ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ, ಡಾ. ಶಾಂತಾರಾಮಪ್ರಭು ಹಾಗೂ ಜಯನಗರ ಶ್ರೀರಾಮ ಮಂದಿರದ ವಿದ್ವಾನ್ ಸತೀಶ್ ಆಚಾರ್ಯರನ್ನು ಆ.10ರ ಸಂಜೆ ಭಾನುವಾರ ಸನ್ಮಾನಿಸಲಾಗುತ್ತದೆ.
ನಗರದ ಎಲ್ಲಾ ಭಕ್ತರು ಶ್ರದ್ಧಾಭಕ್ತಿ ಮತ್ತು ಸೇವಾ ರೂಪಗಳಿಂದ ಶ್ರೀ ಗುರುರಾಯರ ಆರಾಧನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸಮಿತಿ ವಿನಂತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post