Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವತಿಯಿಂದ ನಗರದ ಪೆಸಿಟ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಎರಡು ದಿನಗಳ ವಲಯ ಮಟ್ಟದ ತಾಂತ್ರಿಕ ಉತ್ಸವ ‘ಅರೋರ – 2022’ ಕಾರ್ಯಕ್ರಮದಲ್ಲಿ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ JNNCE Shivamogga ವಿದ್ಯಾರ್ಥಿಗಳು ಚಾಂಪಿಯನ್‌ಶಿಪ್ ಪಡೆದಿದ್ದಾರೆ.
ನಾವಿನ್ಯ ಯೋಜನೆಗಳ ಪ್ರಾತ್ಯಕ್ಷಿಕೆಯಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ರಾಘವೇಂದ್ರ.ಜಿ, ಪ್ರಭಂಜನ್.ಎಂ.ಎನ್, ಸ್ಕಂದ.ಆರ್.ನಾಯ್ಡು ಪ್ರಸ್ತುತ ಪಡಿಸಿದ ಆಮ್ಲಜನಕ ಸಾಂದ್ರಕ ಯೋಜನೆಗೆ ಪ್ರಥಮ ಬಹುಮಾನ ಹಾಗೂ ವಿದ್ಯಾರ್ಥಿಗಳಾದ ಕಾರ್ತಿಕ್.ಎಲ್.ಎಂ, ನಾಗರಾಜ್, ಕೌಶಿಕ್.ಎಂ.ಟಿ ಪ್ರಸ್ತುತ ಪಡಿಸಿದ ವಿವಿಧೋದ್ದೇಶ ಕೃಷಿ ಸಹಾಯಕ ಯಂತ್ರಕ್ಕೆ ದ್ವಿತೀಯ ಬಹುಮಾನ ಲಭಿಸಿದೆ.
ರೋಬೊ ರೇಸ್ ಸ್ಫರ್ದೆಯಲ್ಲಿ ವಿದ್ಯಾರ್ಥಿಗಳಾದ ಆರಿಬ್, ಮನೊಜ್, ಸಾಕಿಬ್, ಪ್ರಮೋದ್ ಮತ್ತು ತಂಡ ಪ್ರಥಮ ಬಹುಮಾನ ಪಡೆದಿದ್ದಾರೆ. ಲೈನ್ ಫಾಲೊವರ್ ರೋಬೊಟಿಕ್ಸ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಕೌಶಿಕ್.ಎಂ.ಟಿ, ನಾಗರಾಜ ಪ್ರಥಮ ಬಹುಮಾನ ರಾಘವೇಂದ್ರ. ಜಿ, ಸಂದೀಪ್ ಸ್ವಾಮಿ.ಪಿ.ಎಸ್ ದ್ವಿತೀಯ ಬಹುಮಾನ ಪಡೆದಿದ್ದಾರೆ.
Also read: ಜಾನಪದ ಸಂಶೋಧನೆಗೆ ಕಾಯಕಲ್ಪ ನೀಡಿದವರು ಪ್ರೊ. ಶಂಕರನಾರಾಯಣ
ಟೆಕ್ನಿಕಲ್ ಕ್ವಿಜ್ ಸ್ಪರ್ಧೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅನಂತ್, ವಿನಾಯಕ್, ವಿಕಾಸ್, ಪರೀಕ್ಷಿತ್ ಪ್ರಥಮ ಸ್ಥಾನ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಸ್ಕಂದ ಆರ್. ನಾಯ್ಡು, ಶಶಾಂಕ್ ಜಿ. ಎಸ್, ಸಿದ್ದಾರ್ಥ, ಭಾರ್ಗವ್ ದ್ವಿತೀಯ ಸ್ಥಾನ ರಾಘವೇಂದ್ರ, ಪ್ರಭಂಜನ, ಗೋಕುಲ್, ಸುಹಾಸ್ ತೃತೀಯ ಸ್ಥಾನ ಪಡೆದಿದ್ದಾರೆ. ಜೊತೆಯಲ್ಲಿ ವರ್ಚುಯಲ್ ಇಂಜಿನಿಯರಿಂಗ್ ಸ್ಫರ್ಧೆಯಲ್ಲಿ ವಿವಿಧ ಬಹುಮಾನಗಳನ್ನು ಪಡೆದು ಚಾಂಪಿಯನ್‌ಶಿಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Discussion about this post