ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಂತ್ರಿಕತೆಯ ಹಲವು ಪ್ರಶ್ನೆ ಗೊಂದಲಗಳಿಗೆ ಉತ್ತರದಾಯಕವಾಗಿ ಹಾಗೂ ನಾವೀನ್ಯಯುತ ಕಲಿಕೆಗೆ ತಾಂತ್ರಿಕ ಪುಸ್ತಕಗಳು ಪ್ರೇರಕ ಶಕ್ತಿಯಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಅಭಿಪ್ರಾಯಪಟ್ಟರು
ನಗರದ ಎಸ್.ಆರ್. ನಾಗಪ್ಪ ಶ್ರೇಷ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ಬಿಸಿಎ ವಿಭಾಗದ ವತಿಯಿಂದ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಹ ಪ್ರಾಧ್ಯಾಪಕ ಪ್ರದೀಪ್.ಜಿ.ಎಸ್ ರಚಿಸಿದ ‘ಪೈಥಾನ್ ಪ್ರೊಗ್ರಾಮಿಂಗ್’ ತಾಂತ್ರಿಕ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪೈಥಾನ್ ಎಂಬ ಆಂಗ್ಲ ಹಾಸ್ಯ ಧಾರಾವಾಹಿಯ ಹೆಸರು ಪ್ರೊಂಗ್ರಾಮಿಂಗ್ ಭಾಷೆಯೊಂದರ ಹೆಸರಾಗಿ ನಾಮಕರಣಗೊಳ್ಳಲು ಪ್ರೇರಣೆಯಾಯಿತು. ಇಂತಹ ಪ್ರೊಗ್ರಾಮಿಂಗ್ ಭಾಷೆಯ ಇತಿಹಾಸದಿಂದ ಪ್ರಸ್ತುತ ಅನ್ವೇಷಣೆಯವರೆಗಿನ ಹಲವು ವಿಚಾರಗಳನ್ನು ಪುಸ್ತಕದ ಮೂಲಕ ಅಧ್ಯಯನ ನಡೆಸಿ. ಈ ಮೂಲಕ ವಾಸ್ತವತೆಯ ಜ್ಞಾನದೊಂದಿಗೆ ಕಲಿಕೆ ಎಂಬ ನಿರಂತರ ಪ್ರಕ್ರಿಯೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

Also read: ‘ಸಾಹಿತ್ಯ ಸಹವಾಸ’ ವಿಚಾರ ಸಂಕಿರಣ ನಿಮಿತ್ತ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ
ವೆಬ್ ಡೆವಲೋಪ್ಮೆಂಟ್, ಕೃತಕ ಬುದ್ಧಿಮತ್ತೆಯ ಕಾರ್ಯನಿರ್ವಹಣೆ ಸೇರಿದಂತೆ ಇಂದಿನ ಪ್ರತಿಯೊಂದು ತಾಂತ್ರಿಕ ಪ್ರಯೋಗಗಳಲ್ಲಿ ಪೈಥಾನ್ ಭಾಷೆ ಮೇಲುಗೈ ಸಾಧಿಸಿದೆ. ಮುಂದಿನ ದಿನಗಳಲ್ಲಿ ಪಿ.ಎಲ್ ಎಸ್ ಕ್ಯೂಎಲ್ ತಂತ್ರಜ್ಞಾನದ ಕುರಿತಾಗಿ ಪುಸ್ತಕ ಬರೆಯುವ ತಯಾರಿಯಲ್ಲಿದ್ದೇವೆ ಎಂದು ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	




 Loading ...
 Loading ... 
							



 
                
Discussion about this post