ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸ್ವಚ್ಛತಾ ಸಪ್ತಾಹದ 2ನೇ ದಿನ ನಗರದ ಶಿವಪ್ಪ ನಾಯಕ ವೃತ್ತ, ಬಿ ಹೆಚ್. ರಸ್ತೆ, ಬಳಿ ಪ್ಲಾಸ್ಟಿಕ್ ಆರಿಸಿ ಜನಜಾಗೃತಿ ಮಾಡಲಾಯಿತು.
ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ, ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್, ಡಿವಿಎಸ್ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ್, ಎನ್ಎಸ್ಎಸ್ ಅಧಿಕಾರಿ ತ್ರಿಶೂಲ್, ರಾಜುನಾಯ್ಕ್, ಮಲ್ಲಿಕಾರ್ಜುನ್, ಕೇತನ, ಆಶಾ, ಸ್ವಯಂಸೇವಕರು ಗಳಾದ ಪುನೀತ್ ಬೆಳ್ಳೂರು, ಗಣೇಶ್, ಜಯಂತ್ ಬಾಬು, ರಮೇಶ್ ಇನ್ನಿತರರು ಮತ್ತು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಶೈಲಜಾ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸ್ವಚ್ಛತಾ ಅಭಿಯಾನ ಒಂದು ವಾರಗಳ ಕಾಲ ನಡೆಯಲಿದ್ದು ನಾಳೆ ಬೆಳಿಗ್ಗೆ 6.30 ರಿಂದ 8ಗಂಟೆವರೆಗೆ ಬಿ.ಹೆಚ್. ರಸ್ತೆಯ ಮೀನಾಕ್ಷಿ ಭವನ್ ಹೋಟೆಲ್ ಹತ್ತಿರ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಮಾಡಲಾಗುವುದು. ಆಸಕ್ತ ಸ್ವಯಂಸೇವಕರುಗಳು ಮತ್ತು ಸಾರ್ವಜನಿಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post