ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 3ನೇ ದಿನ ನಗರದ ಮೀನಾಕ್ಷಿ ಭವನದಿಂದ ಜಯದೇವ ಸರ್ಕಲ್ ವರೆಗೆ ಪ್ಲಾಸ್ಟಿಕ್ ಆರಿಸಿ ಜನಜಾಗೃತಿ ಮಾಡಲಾಯಿತು.
ಮಹಾನಗರ ಪಾಲಿಕೆಯ ಸದಸ್ಯರಾದ ಸುರೇಖ ಮುರಳಿಧರ್, ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ, ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್, ಡಿವಿಎಸ್ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ್, ಎನ್ಎಸ್ಎಸ್ ಅಧಿಕಾರಿ ತ್ರಿಶೂಲ್, ನಾಗರಾಜನಾಯ್ಕ್, ರಾಜುನಾಯ್ಕ್, ಮಲ್ಲಿಕಾರ್ಜುನ್, ಕೇತನ, ಆಶಾ, ಸ್ವಯಂಸೇವಕರು ಗಳಾದ ಪುನೀತ್ ಬೆಳ್ಳೂರು, ಗಣೇಶ್, ಜಯಂತ್ ಬಾಬು, ರಮೇಶ್ ಇನ್ನಿತರರು ಮತ್ತು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ಸ್ವಚ್ಛತಾ ಅಭಿಯಾನ ಒಂದು ವಾರಗಳ ಕಾಲ ನಡೆಯಲಿದ್ದು, ನಾಳೆ ಬೆಳಿಗ್ಗೆ 6.30 ರಿಂದ 8ಗಂಟೆವರೆಗೆ ನೆಹರು ಸ್ಟೇಡಿಯಂ ಹತ್ತಿರ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಮಾಡಲಾಗುವುದು. ಆಸಕ್ತ ಸ್ವಯಂಸೇವಕರುಗಳು ಮತ್ತು ಸಾರ್ವಜನಿಕರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಕೋರಿದೆ.

ಆಯನೂರಿನಲ್ಲಿ ಸ್ವಚ್ಛತಾ ಸಪ್ತಾಯ:
ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವ ಕೇಂದ್ರ, ಶಿವಮೊಗ್ಗ. ರಾಷ್ಟ್ರೀಯ ಸೇವಾ ಯೋಜನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಯನೂರು. ಹಾಗೂ ಕೋಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಜಾದಿ ಕ ಅಮೃತಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 3ನೆಯ ದಿನ ಆಯನೂರು ವೃತ್ತ ದಲ್ಲಿ ಪ್ಲಾಸ್ಟಿಕ್ ಆರಿಸಿ ಜನ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಪ್ಲಾಸ್ಟಿಕ್ನಿಂದ ಪರಿಸರದ ಮೇಲೆ ಜಲಚರಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ಸಾರ್ವಜನಿಕರಿಗೆ ಮತ್ತು ಸ್ವಯಂ ಸೇವಕರುಗಳಿಗೆ ವಿವರಿಸಿ ತಿಳಿಸಿದರು.
ನೆಹರು ಯುವ ಕೇಂದ್ರದ ಅಧಿಕಾರಿ ಉಲ್ಲಾಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಚಂದ್ರ ದೇವರು ಹೆಗಡೆ, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ತ್ರಿಶೂಲ್ ಜಿಎಸ್ ಏನ್ಎಸ್ಎಸ್ ಕಚೇರಿಯ ರಾಚಪ್ಪ ಹಾಗೂ ಎನ್ಎಸ್ಎಸ್ ನ ಹಿರಿಯ ಸ್ವಯಂಸೇವಕರುಗಳಾದ ಪುನೀತ್ ಬೆಳ್ಳೂರು ಜಯಂತ್ ಬಾಬು ಇನ್ನಿತರ ಐವತ್ತಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















