ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು Azim Premji University ನಾಲ್ಕು ವರ್ಷಗಳ ಪೂರ್ಣಕಾಲಿಕ ಬಿ.ಎ ಆನರ್ಸ್, ಬಿ.ಎಸ್ಸಿ ಆನರ್ಸ್ ಮತ್ತು ದ್ವಿ-ಪದವಿ ಬಿ.ಎಸ್ಸಿ-ಬಿ.ಎಡ್ ವಿಷಯಗಳ ಪದವಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಅಜೀಂ ಪ್ರೇಮ್ಜಿ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ಬೆಂಗಳೂರು ಮತ್ತು ಭೋಪಾಲ್ನಲ್ಲಿರುವ ವಿಶ್ವವಿದ್ಯಾಲಯಗಳನ್ನು ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ಕೊಡುಗೆ ನೀಡುವ ಸ್ಪಷ್ಟ ಸಾಮಾಜಿಕ ಉದ್ದೇಶದೊಂದಿಗೆ ಲಾಭರಹಿತ ಘಟಕಗಳಾಗಿ ಸ್ಥಾಪಿಸಲಾಗಿದೆ.
ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಕಾಯ್ದೆ 2010ರ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿದ್ದು, ಭೋಪಾಲ್ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಮಧ್ಯಪ್ರದೇಶ ನಿಜಿ ವಿಶ್ವ ವಿದ್ಯಾಲಯ ದ್ವಿತೀಯ ಸಂಶೋಧನ್ ಅಧಿನಿಯಮ್, 2022ರ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿದೆ.
Also read: ರೇಡಿಯಾಲಜಿ ಓದಿದ್ದೀರಾ? ಹಾಗಾದರೆ ಶಿವಮೊಗ್ಗದಲ್ಲಿ ನಿಮಗಿದೆ ಉದ್ಯೋಗಾವಕಾಶ
ರಾಷ್ಟೀಯ ಶಿಕ್ಷಣ ನೀತಿ 2020ರ ಅನುಗುಣವಾಗಿ ರೂಪಿಸಿ ವಿನ್ಯಾಸಗೊಳಿಸಲಾದ ಪ್ರವೇಶದಲ್ಲಿ ನಾಲ್ಕು ಸಂಯೋಜಿತ ಅಂಶಗಳಲ್ಲಿ ಪ್ರಧಾನ ವಿಷಯವೊಂದರ ವಿಶೇಷ ಅಧ್ಯಯನವನ್ನೊಳಗೊಂಡ ಶೈಕ್ಷಣಿಕ ಶಿಸ್ತು, ಉದ್ಯೋಗದ ಸಿದ್ಧತೆಯ ಭಾಗವಾಗಿ ಆಳವಾದ ಇಂಟರ್ನ್ಶಿಪ್ನೊಂದಿಗೆ ಸಂಯೋಜಿಸಲಾದ ಅಂತರ್-ಶಿಸ್ತೀಯ ಆಯಾಮ, ಸಾಮಥ್ರ್ಯವೃದ್ದಿಗಾಗಿ ಬುನಾದಿ ಕೋರ್ಸುಗಳು ಮತ್ತು ವಿಸ್ತೃತವಾದ ಆಸಕ್ತಿಯ ವಿಷಯಗಳ ಶೋಧನೆಗೆ ಪೂರಕವಾದ ಕ್ರೆಡಿಟ್ಗಳ ಆಯ್ಕೆಗೆ ಅವಕಾಶ.
ಕ್ಯಾಂಪಸ್ 4 ವರ್ಷಗಳ ಪದವಿಗಳು: ಭೋಪಾಲ್ನಲ್ಲಿ ಬಿ.ಎಸ್ಸಿ ಆನರ್ಸ್ (ಜೀವ ವಿಜ್ಞಾನ), ಬಿ.ಎ ಆನರ್ಸ್ (ಅರ್ಥಶಾಸ್ತ್ರ, ಇಂಗ್ಲಿಷ್, ಇತಿಹಾಸ, ಸಮಾಜ, ಮತ್ತು ವಿಜ್ಞಾನ). ಬೆಂಗಳೂರಿನಲ್ಲಿ ಬಿ.ಎ ಆನರ್ಸ್ (ಅರ್ಥಶಾಸ್ತ್ರ, ಇಂಗ್ಲಿಷ್, ಇತಿಹಾಸ, ತತ್ವಶಾಸ್ತ್ರ, ಸಮಾಜ ವಿಜ್ಞಾನ, ರಾಜಕೀಯ ಮತ್ತು ಅರ್ಥಶಾಸ್ತ್ರ), ಬಿ.ಎಸ್ಸಿ ಆನರ್ಸ್ (ಜೀವ ವಿಜ್ಞಾನ| ರಸಾಯನ ವಿಜ್ಞಾನ | ಗಣಿತ | ಭೌತ ವಿಜ್ಞಾನ | ಪರಿಸರ ವಿಜ್ಞಾನ ಮತ್ತು ಸುಸ್ಥಿರತೆ | ಮಾಹಿತಿ ವಿಜ್ಞಾನ) ಬಿ.ಎಸ್ಸಿ. ಬಿಎಡ್. (ಜೀವ ವಿಜ್ಞಾನ| ರಸಾಯನ ವಿಜ್ಞಾನ | ಗಣಿತ | ಭೌತ ವಿಜ್ಞಾನ)
ಪ್ರವೇಶ ಪ್ರಕ್ರಿಯೆ ಮತ್ತು ದಿನಾಂಕಗಳು: ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್ ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿದಾರರನ್ನು ಮೊದಲ ಸುತ್ತಿನ ಲಿಖಿತ ಪರೀಕ್ಷೆ ಹಾಗೂ ಆ ನಂತರದಲ್ಲಿ ನಡೆಸಲಾಗುವ ವೈಯಕ್ತಿಕ ಸಂದರ್ಶನವನ್ನು ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 6 ಮಾರ್ಚ್ 2024, ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆ 7 ಏಪ್ರಿಲ್ 2024, ವೈಯಕ್ತಿಕ ಸಂದರ್ಶನ ಏಪ್ರಿಲ್ 2024, ಪ್ರವೇಶ ಪತ್ರ ನೀಡಿಕೆ ಮೇ 2024, ತರಗತಿಗಳ ಪ್ರಾರಂಭ ಜುಲೈ 2024
ಬೋಧನಾ ಶುಲ್ಕ ಮತ್ತು ವಸತಿ ವೆಚ್ಚಗಳನ್ನು ಒಳಗೊಂಡ ಅಗತ್ಯತೆ-ಆಧರಿತ ಹಣಕಾಸಿನ ನೆರವನ್ನು (ಪೂರ್ಣ ಅಥವಾ ಭಾಗಶಃ) ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ನೀಡುತ್ತದೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ವಿಳಾಸ: ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಕನ್ಹಾಸಯ್ಯಾ, ಭೋಪಾಲ್, ಮಧ್ಯಪ್ರದೇಶ – 462 022 ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಸರ್ಜಾಪುರ, ಬೆಂಗಳೂರು, ಕರ್ನಾಟಕ – 562 125 ಮೋ: 8971889988
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post