ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನ ಮಂಡಲದ ವಿಶೇಷ ಅಧಿವೇಶನದ #Special Session of the Legislature ವೇಳೆ ರಾಜ್ಯಪಾಲರ ವಿರುದ್ಧ ಅವಮಾನಕಾರಿ ಕೈಸೂಚನೆ ತೋರಿಸಿ, ಅಧಿವೇಶನದಲ್ಲಿ ಅಸಭ್ಯವಾಗಿ ವರ್ತಿಸಿದ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ #B K Hariprasad ಅವರ ಮೇಲೆ ಭಾರತೀಯ ದಂಡ ಸಂಹಿತೆ ಹಾಗೂ ಇತರ ಕಾನೂನು ವಿಧಿಗಳಡಿಯಲ್ಲಿ ತಕ್ಷಣ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಬಿಜೆಪಿ ನಗರ ಯುವಮೋರ್ಚಾ ವತಿಯಿಂದ ಇಂದು ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಬಿ.ಕೆ.ಹರಿಪ್ರಸಾದ್ ಅವರ ಅವಮಾನಕಾರಿ, ಅಸಭ್ಯ, ಶಿಸ್ತುಬಾಹಿರ ವರ್ತನೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯಪಾಲರು ರಾಜ್ಯದ ಸಂವಿಧಾನಾತ್ಮಕ ಮುಖ್ಯಸ್ಥರಾಗಿದ್ದು, ಸದನದೊಳಗೆ ಅವರ ವಿರುದ್ಧ ಈ ರೀತಿಯ ಕೈಸೂಚನೆ ತೋರಿಸುವುದು ಭಾರತದ ಸಂವಿಧಾನ, ವಿಧಾನ ಮಂಡಲದ ಶಿಸ್ತು, ಸಂಪ್ರದಾಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾಡಿದ ಗಂಭೀರ ಅಪಮಾನವಾಗಿದ್ದು, ಈ ಕೃತ್ಯವು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಮಾಡಿದ ಗಂಭೀರ ಅಪಮಾನವಾಗಿದೆ. ಇದು ಸಂವಿಧಾನಾತ್ಮಕ ಹುದ್ದೆಯ ಗೌರವವನ್ನು ಕುಂದಿಸುವುದರ ಜೊತೆಗೆ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆತರುವಂತಹದಾಗಿದೆ.
ಮೇಲ್ಕಂಡ ಕೃತ್ಯವು ಪ್ರಾಥಮಿಕವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 1530, 504, 505(1), 506 ಹಾಗೂ 34ರ ಅಡಿಯಲ್ಲಿ ಅಪರಾಧಕ್ಕೆ ಒಳಪಟ್ಟಿರುವುದು ಕಂಡು ಬರುತ್ತದೆ. ಆದ್ದರಿಂದ ಕೂಡಲೇ ವಿಧಾನಪರಿಷತ್ ಹಿರಿಯ ಸದಸ್ಯ ಹರಿಪ್ರಸಾದ್ ಅವರ ಮೇಲೆ ಸಂವಿಧಾನಾತ್ಮಕ ಹುದ್ದೆಗೆ ಅಗೌರವ ತಂದಿರುವ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಸಮ್ಮತ ಕ್ರಮ ಜರುಗಿಸಬೇಕೆಂದು ಬಿಜೆಪಿ ಯುವಮೋರ್ಚಾ ಒತ್ತಾಯ ಮಾಡಿದೆ.
ಈ ಸಂದರ್ಭದಲ್ಲಿ ಬಿಜೆಪಿ ನಗರ ಯುವಮೋರ್ಚಾ ಅಧ್ಯಕ್ಷರಾದ ರಾಹುಲ್ ಪಿ.ಬಿದಿರೆ, ನಗರ ಅಧ್ಯಕ್ಷ ಡಿ.ಮೋಹನ್‌ರೆಡ್ಡಿ, ಪ್ರಮುಖರಾದ ದೀನ್‌ದಯಾಳ್, ಕುಪೇಂದ್ರ, ಅಭಿಷೇಕ್, ದರ್ಶನ್, ಕಾರ್ತೀಕ್, ಕಿರಣ್, ಶಶಿಕುಮಾರ್, ಸುರೇಖಾ ಮುರಳೀಧರ್, ಶಾಂತಾ ಸುರೇಂದ್ರ, ರಶ್ಮಿಶ್ರೀನಿವಾಸ್, ಚೈತ್ರಾಪೈ, ಶ್ರೀನಾಗ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















