ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಲೋಕಸಭಾ ಚುನಾವಣೆಗೆ #Lok Sabha Election ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿರುವ ಹಾಲಿ ಸಂಸದ ಬಿ.ವೈ. ರಾಘವೇಂದ್ರ #B Y Raghavendra ಅವರು ಒಟ್ಟು 73.71 ಕೋಟಿ ರೂ. ಆಸ್ತಿಯನ್ನು ಘೋಷಿಸಿದ್ದಾರೆ.
ತಮ್ಮ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್’ನಲ್ಲಿ ತಮ್ಮ ಆಸ್ತಿ ವಿವರವನ್ನು ಬಹಿರಂಗ ಪಡಿಸಿರುವ ಅವರು, ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಕುರಿತಾಗಿಯೂ ಸಹ ಉಲ್ಲೇಖಿಸಿದ್ದಾರೆ.
ಅಫಿಡವಿಟ್ ಪ್ರಕಾರ, ರಾಘವೇಂದ್ರ ಅವರು ತಮ್ಮ ಹೆಸರಿನಲ್ಲಿ 55.85 ಕೋಟಿ ರೂ. ಹಾಗೂ ಪತ್ನಿ ತೇಜಸ್ವಿನಿ ಹೆಸರಿನಲ್ಲಿ 17.86 ಕೋಟಿ ರೂ. ಆಸ್ತಿ ಇದೆ ಎಂದು ಉಲ್ಲೇಖಿಸಿದ್ದಾರೆ.
Also read: ಶಿವಮೊಗ್ಗ | ಪಿಕ್‍ಪಾಕೇಟ್ ಸರ್ಕಾರ | ಕಾಂಗ್ರೆಸ್ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಕಿಡಿ
ಹೀಗಿದೆ ರಾಘವೇಂದ್ರ ಅವರ ಆಸ್ತಿ ವಿವರ
- ರಾಘವೇಂದ್ರ ಅವರು ತಮ್ಮ ಬಳಿ 33,291 ರೂ. ನಗದು ಹೊಂದಿದ್ದಾರೆ
- ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ ಬಳಿ 9,39,109 ರೂ. ನಗದು ಇದೆ
- ರಾಘವೇಂದ್ರ ಅವರು ವಿವಿಧ ಬ್ಯಾಂಕ್’ನ 13 ಖಾತೆಗಳಲ್ಲಿ 98,01,123 ರೂ. ಹಣ ಇದೆ
- ತೇಜಸ್ವಿನಿ ಅವರ ಹೆಸರಿನ 8 ಖಾತೆಗಳಲ್ಲಿ 25,65,577 ರೂ. ಹಣ ಇದೆ
- 15 ಕಂಪನಿಗಳಲ್ಲಿ ರಾಘವೇಂದ್ರ ಅವರು 7.68 ಕೋಟಿ ರೂ. ಹೂಡಿಕೆ ಮಾಡಿದ್ದಾರೆ
- ತೇಜಸ್ವಿನಿ ಆರು ಕಂಪನಿಗಳಲ್ಲಿ 1.22 ಕೋಟಿ ರೂ. ಹೂಡಿಕೆ ಮಾಡಿದ್ದಾರೆ
- ಬಾಂಡ್, ಮ್ಯೂಚುವಲ್ ಫಂಡ್’ನಲ್ಲಿ ರಾಘವೇಂದ್ರ 2.22 ಕೋಟಿ ರೂ. ಹೂಡಿಕೆ
- ತೇಜಸ್ವಿನಿ ಅವರಿಂದ ಮ್ಯೂಚವಲ್ ಫಂಡ್’ನಲ್ಲಿ 30 ಸಾವಿರ ರೂ. ಹೂಡಿಕೆ
ರಾಘವೇಂದ್ರರ ಆಸ್ತಿ ಎಲ್ಲೆಲ್ಲಿ ಇದೆ?
- ಶಿವಮೊಗ್ಗದ ವಿನೋಬನಗರ, ಶಿಕಾರಿಪುರದಲ್ಲಿ ವಾಸದ ಮನೆಗಳು (ಮೌಲ್ಯ ಒಟ್ಟು 4.18 ಕೋಟಿ ರೂ.)
- 1.32 ಕೋಟಿ ರೂ. ಮೌಲ್ಯದ ಒಟ್ಟು 11.33 ಎಕರೆ ಕೃಷಿ ಜಮೀನು
- 18 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ
- 1.24 ಕೋಟಿ ರೂ. ಮೌಲ್ಯದ ಕಟ್ಟಡ
- ತೇಜಸ್ವಿನಿ ಹೆಸರಿನಲ್ಲಿ 8.07 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ
- ತೇಜಸ್ವಿನಿ 6.82 ಕೋಟಿ ರೂ. ಮೌಲ್ಯದ ವಾಸದ ಮನೆ
ವಾಹನ ಎಷ್ಟಿವೆ?
- ಒಂದು ಅಂಬಾಸಿಡರ್ ಕಾರು(1988ರ ಮಾಡೆಲ್)
- ಟೊಯೋಟಾ ಫಾರ್ಚೂನರ್ ಕಾರು
- ಒಂದು ಟ್ರಾಕ್ಟರ್
- ಮೂರು ವಾಹನಗಳ ಮೌಲ್ಯ ಒಟ್ಟು 44.77 ಲಕ್ಷ ರೂ.
ಬೆಳ್ಳಿ, ಬಂಗಾರ ಎಷ್ಟಿದೆ?
- ರಾಘವೇಂದ್ರ ಬಳಿ 42 ಬೆಲೆ ಬಾಳುವ ಹರಳುಗಳು
- 1021.50 ಗ್ರಾಂ ಚಿನ್ನ
- 114.26 ಕ್ಯಾರೆಟ್ ವಜ್ರ
- 8.6 ಕೆ.ಜಿ ಬೆಳ್ಳಿ
- ಒಟ್ಟು ಮೌಲ್ಯ-98.83 ಲP್ಷÀ ರೂ.
- ತೇಜಸ್ವಿನಿ ಬಳಿಯಲ್ಲಿ 1395.92 ಗ್ರಾಂ ಚಿನ್ನ
- 96.022 ಕ್ಯಾರೆಟ್ ವಜ್ರ
- 5.1 ಕೆ.ಜಿ ಬೆಳ್ಳಿ ಇದೆ
- ಒಟ್ಟು ಮೌಲ್ಯ 1.13 ಕೋಟಿ ರೂ.
ಯಾರಿಗೆಲ್ಲಾ, ಎಷ್ಟು ಸಾಲ ನೀಡಿದ್ದಾರೆ?
ಇನ್ನು, ರಾಘವೇಂದ್ರ ಅವರು ತಮ್ಮ ಕುಟುಂಬದ ಬಹಳಷ್ಟು ಸದಸ್ಯರಿಗೆ ಸಾಲ ನೀಡಿದ್ದಾರೆ.
- ಸಹೋದರ ವಿಜಯೇಂದ್ರಗೆ 85 ಲಕ್ಷ ರೂ. ಸಾಲ
- ಪತ್ನಿ ತೇಜಸ್ವಿನಿ ಅವರಿಗೆ 5.49 ಕೋಟಿ ರೂ. ಸಾಲ
- ಪುತ್ರ ಭಗತ್’ಗೆ 65 ಲಕ್ಷ ರೂ. ಸಾಲ
- ಇನ್ನೊಬ್ಬ ಪುತ್ರ ಸುಭಾಷ್’ಗೆ 85 ಲಕ್ಷ ರೂ. ಸಾಲ
- ವಿವಿಧ ಸಂಸ್ಥೆಗಳಿಗೆ 20.39 ಕೋಟಿ ರೂ. ಸಾಲ
- ಭಗತ್ ಹೋಮ್ಸ್ ಪ್ರೈವೇಟ್ ಲಿಮಿಟೆಡ್‌ಗೆ 2.50 ಲಕ್ಷ ರೂ. ಸಾಲ
ಎಷ್ಟು ಸಾಲವಿದೆ?
- ರಾಘವೇಂದ್ರ ಹೆಸರಿನಲ್ಲಿ ಒಟ್ಟು 69.39 ಲಕ್ಷ ರೂ. ಸಾಲವಿದೆ
- ಅವರ ಪತ್ನಿ ತೇಜಸ್ವಿನಿ ಅವರಿಗೆ 12.91 ಕೋಟಿ ರೂ. ಸಾಲವಿದೆ
ಅವರ ವಿರುದ್ಧ ಪ್ರಕರಣ?
ಚುನಾವಣಾ ಅಫಿಡವಿಟ್ ಪ್ರಕಾರ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post