ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಶಿಕಾರಿಪುರ ತಾಲೂಕು ಬನ್ನೂರು ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 1 x 10 ಎಂ.ವಿ.ಎ 110/11 ಕೆ.ವಿ. ವಿದ್ಯುತ್ ಉಪಕೇಂದ್ರಕ್ಕೆ ಈಗಿರುವ ಸಂಡ 110/11 ಕೆವಿ. ವಿದ್ಯುತ್ ಉಪಕೇಂದ್ರದಿಂದ ಸುಮಾರು 12.748 ಕಿ.ಮೀ. ಉದ್ದದ 110 ಕೆವಿ ವಿದ್ಯುತ್ ಪ್ರಸರಣ ಮಾರ್ಗವನ್ನು ನೂತನವಾಗಿ ನಿರ್ಮಿಸುವ ಕಾಮಗಾರಿಯಲ್ಲಿ ಬರುವ ಮಾರ್ಗದ ಕಾರಿಡಾರ್ ಮತ್ತು ಗೋಪುರದ ತಳಪಾಯದ ಭೂನಷ್ಟ ಪರಿಹಾರವನ್ನು ನಿಗಧಿಪಡಿಸಲು ಸಾಗರ ಉಪವಿಭಾಗಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ಜ.17ರಂದು ಸಂಜೆ 4ಕ್ಕೆ ಶಿಕಾರಿಪುರ ತಾಲೂಕು ಪಂಚಾಯತ್ ಕಾರ್ಯಾಲಯದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.
ಈ ಸಭೆಗೆ ಶಿಕಾರಿಪುರ ತಾಲೂಕಿನ ಕಸಬ ಹೋಬಳಿಯ ಸಂಡ ಹರಗವಳ್ಳಿ, ಆಮಟಿಕೊಪ್ಪ, ಕೋಟಿಪುರ, ಕಪ್ಪನಹಳ್ಳಿ, ಚೂಚನಕೊಪ್ಪ, ಹೊತನಕಟ್ಟೆ, ರಾಂಪುರ ಮತ್ತು ಬನ್ನೂರು ಗ್ರಾಮಗಳ ಕಾರಿಡಾರ್ ಜಮೀನು ಭೂ ಮಾಲೀಕರು ಸಭೆಗೆ ತಪ್ಪದೇ ಹಾಜರಾಗುವಂತೆ ಶಿವಮೊಗ್ಗ ಬೃ,ಕಾ.ವಿ., ಕವಿಪ್ರನಿನಿಯ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post