ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ದೃಷ್ಟಿಯಿಂದ ಮತ್ತೆ ಬ್ರಿಗೇಡ್ ಚರ್ಚೆ ಆರಂಭವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ #RCB (ರಾಯಣ್ಣ ಚನ್ನಮ್ಮ ಬ್ರಿಗೇಡ್) ರಚನೆ ಮಾಡಲು ಅ.7ರಂದು ಬೆಳಿಗ್ಗೆ 11ಕ್ಕೆ ಹುಬ್ಬಳ್ಳಿಯ ಸ್ವಾತಿ ಹೋಟೆಲ್‍ನಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ #K S Eshwarappa ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಜಮಖಂಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಜಯಮೃತ್ಯುಂಜಯ ಸ್ವಾಮಿಜಿಗಳು ನನಗೆ ಮತ್ತು ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಅವರಿಗೆ ಖಡ್ಗ ಕೊಟ್ಟು ಹಿಂದುಗಳಿಗೆ ರಕ್ಷಣೆ ಕೊಡಿ ನಿಮಿಬ್ಬರಲ್ಲಿ ರಾಯಣ್ಣ ಮತ್ತು ಚನ್ನಮ್ಮ ಅವರ ರಕ್ತವಿದೆ. ಈ ಹಿನ್ನಲೆಯಲ್ಲಿ ಆರ್‍ಸಿಬಿ ರಚನೆ ಮಾಡಿ ಎಂದು ಹೇಳಿದ್ದರು. ಅಲ್ಲಿದ್ದ ಎಲ್ಲರೂ ಇದನ್ನು ಹರ್ಷದಿಂದ ಸ್ವಾಗತಿಸಿ ಬೆಂಬಲ ನೀಡಿದ್ದರು. ಈಗ ಅವರ ಆಶೀರ್ವದಾದಂತೆ ಹುಬ್ಬಳ್ಳಿಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದರು.

ಜಾತಿ ಜನಗಣತಿ ವರದಿಯ ಬಗ್ಗೆ ಪ್ರಾಸ್ತಾಪಿಸಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮೊದಲು ಜಾತಿ ಗಣತಿ ವರದಿಯನ್ನು ಅನುಷ್ಠಾನ ತರುವುದಾಗಿ ಮಾತು ಕೊಟ್ಟಿದ್ದರು. ಆದರೆ ಅವರ ಧ್ವನಿ ಈಗ ಬದಲಾಗಿದೆ. ಜನರ ಅಭಿಪ್ರಾಯ ಪಡೆದು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇದು ಸರಿಯಲ್ಲ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಈಗಾಗಲೇ ಈ ವರದಿ ನೆನೆಗುದಿಗೆ ಬಿದ್ದಿದೆ. ಧ್ವನಿ ಬದಲಾಯಿಸದೆ ದಿಟ್ಟ ಹೆಜ್ಜೆ ಇಡಿ, ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಸಾರ್ವಜನಿಕ ಚರ್ಚೆಗೆ ಬಿಡಿ, ಅದನ್ನು ವಿರೋಧಿಸುವುದಾಗಲಿ, ಸ್ವಾಗತಿಸುವುದಾಗಲಿ ಸರಿಯಲ್ಲ. ಅದರಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ ಎಂದರು.

Also read: ಮೈಸೂರು ದಸರಾ ಉದ್ಘಾಟನಾ ಸಮಾರಂಭ ರಾಜಕೀಯ ಭಾಷಣಕ್ಕೆ ದುರ್ಬಳಕೆ: ಬಿಜೆಪಿ ಖಂಡನೆ
ರಾಜಕಾರಣ ಇರಲಿ ಬೇಡ ಎಂದವರು ಯಾರು, ಆದರೆ ದ್ವೇಷದ ರಾಜಕಾರಣ ಬೇಡ. ದಶಕಗಳ ಹಿಂದೆ ಒಂದು ಸೈದ್ಧಾಂತಿಕ ವಿರೋಧವಿರುತ್ತಿತ್ತು. ಪರಸ್ಪರ ಪ್ರೀತಿಯಿಟ್ಟುಕೊಂಡೆ ಜಗಳ ಮಾಡುತ್ತಿದ್ದರು. ಆದರೆ ಈಗ ದ್ವೇಷದ ರಾಜಕಾರಣವಾಗಿ ಬದಲಾಗಿದೆ. ರಾಜಕರಣಿಗಳಿಗೆ ಆ ದೇವರೇ ಬುದ್ಧಿಕೊಡಲಿ ವೈಯುಕ್ತಿಕ ಟೀಕೆ ಮಾಡದೇ ಶುದ್ಧ ರಾಜಕಾರಣ ಮಾಡಿ ಎಂದರು.

ಬಿಜೆಪಿಗೆ ಮರಳಿ ಹೋಗುವ ಪ್ರಶ್ನೆ ಸದ್ಯಕ್ಕಂತೂ ಇಲ್ಲ, ಆ ಬಗ್ಗೆ ಚರ್ಚೆಯಾಗಲೇಬೇಕು. ಕುಟುಂಬ ರಾಜಕಾರಣವನ್ನು ವಿರೋಧಿಸಿ ನಾನು ಚುನಾವಣೆಗೆ ನಿಂತಿದ್ದೆ, ನಾನು ತಪ್ಪು ಮಾಡಿರಲಿಲ್ಲ, ಮೊದಲು ಆ ಬಗ್ಗೆ ಚರ್ಚೆಯಾಗಲಿ ಆಮೇಲೆ ಬಿಜೆಪಿಗೆ ಸೇರುವ ಮಾತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಮಹಾಲಿಂಗಯ್ಯಶಾಸ್ತ್ರಿ, ಕುಬೇಂದ್ರ, ರುದ್ರಯ್ಯ ಶಾಸ್ತ್ರಿ, ಶಿವಾಜಿ, ಮೋಹನ್ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 























Discussion about this post