ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಮತ್ತು ಬುದ್ದಿ ಜೀವಿಗಳ ಬಗ್ಗೆ ಅಸಂಬದ್ದವಾಗಿ, ಅವಹೇಳನಕಾರಿಯಾಗಿ ಮಾತನಾಡಿರುವ ಅವಿವೇಕಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಇಂದು ಶಿವಪ್ಪನಾಯಕ ಪ್ರತಿಮೆ ಬಳಿ ಯತ್ನಾಳ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ತಾಲಿಬಾನ್ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ತಮ್ಮ ಬಾಯಿ ಚಪಲಕ್ಕಾಗಿ ಹೊಲಸು ಮಾತುಗಳನ್ನಾಡಿದ್ದಾರೆ. ಆತನ ನಾಲಿಗೆಯೇ ಅವನ ಗುಣವನ್ನು ತಿಳಿಸುತ್ತದೆ. ಈಗಾಗಲೇ ರಾಜಕರಣದಿಂದ ಮಾನಸಿಕ ಹಿಡಿತ ಕಳೆದುಕೊಂಡಿರುವ ಯತ್ನಾಳ್ ಒಬ್ಬ ಹುಚ್ಚನಂತೆ ಈ ದೇಶದ ಬುದ್ದಿ ಜೀವಿಗಳ ವಿರುದ್ಧವು ಮಾತನಾಡಿದ್ದಾರೆ ಇದು ತೀವ್ರ ಖಂಡನೀಯ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಯತ್ನಾಳ್ ಅವರನ್ನು ಕರ್ನಾಟಕದಿಂದಲೇ ಓಡಿಸಬೇಕಾಗಿದೆ. ಈತ ಮೊದಲು ತನ್ನ ಮಾತನ್ನು ತಿದ್ದುಕೊಳ್ಳಬೇಕು. ಕನ್ನಡಿಗರ ಕ್ಷಮೇ ಕೇಳಬೇಕು ಮತ್ತು ಧರ್ಮಗಳ ನಡುವೆ ಮಾತನಾಡಿ, ದೇಶದಲ್ಲಿ ಶಾಂತಿ ಕದಡುವ ಹೇಳಿಕೆ ನೀಡುತ್ತಿರುವ ಇಂತಹ ದೇಶದ್ರೋಹಿಯನ್ನು ಶಾಸಕ ಸ್ಥಾನದಿಂದ ಕೂಡಲೇ ವಜಾಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯಪಾಲರಲ್ಲಿ ಯುವ ಕಾಂಗ್ರೆಸ್ ಆಗ್ರಹಿಸುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎನ್. ರಮೇಶ್ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್,ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಲೋಕೇಶ್, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ನ ಎಸ್.ಕುಮರೇಶ್ , ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಶಿಕುಮಾರ್ ಸಿರಿಗೆರೆ , ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲೀಮ್ ಅಹಮ್ಮದ್ ಸಿರಿಗೆರೆ, ಪದಾಧಿಕಾರಿಗಳಾದ ಅರುಣ್ ನವುಲೆ , ವೆಂಕಟೇಶ್ ಕಲ್ಲೂರು , ಪವನ್ , ಮಸ್ತಾನ್ ,ಸುಹಾಸ್ ಗೌಡ , ಶ್ರೀನಿವಾಸ್ , ರಾಹುಲ್ ಸಿಗೇಹಟ್ಟಿ, ಪ್ರಶಾಂತ್ , ದೇವರಾಜ್ , ನಾಗರಾಜ್ , ವೆಂಕಟೇಶ್, ಅಭಿ, ಚೇತನ್ , ನಂದಕುಮಾರ್ , ರಾಖಿ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post