ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ಬಯಲಾಗಿದ್ದು, ಇದರ ತನಿಖೆ ವೇಳೆ ದಾಖಲೆ ಪತ್ತೆಯಾಗಿರುವ ದೇಶ ವಿರೋಧಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಬೇಕು ಎಂದು ಜಿಪಂ ಮಾಜಿ ಸದಸ್ಯ, ಬಿಜೆಪಿ ಮುಖಂಡ ಕೆ.ಈ. ಕಾಂತೇಶ್ K E Kantesh ಆಗ್ರಹಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತ್ತೀಚೆಗೆ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿರವರನ್ನು ಹತ್ಯೆಗೈಯುವ ಸಂಚು ಬಯಲಾಗಿದ್ದು, ಈ ಸಂದರ್ಭದಲ್ಲಿ ತನಿಖೆಯಿಂದ ಹೊರ ಬಂದ ಸತ್ಯವು ಆಘಾತಕಾರಿಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಇಸ್ಲಾಂ ಮೂಲಭೂತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಆಂತರಿಕ ದಾಖಲೆಯೊಂದು ಪೋಲೀಸರಿಗೆ ಲಭ್ಯವಾಗಿದ್ದು, ಈ ದಾಖಲೆಯ ಪ್ರಕಾರ ಭಾರತವನ್ನು 2047 ರ ವೇಳೆಗೆ ಮುಸಿರಂ ರಾಷ್ಟ್ರವನ್ನಾಗಿ ಪರಿವರ್ತಿಸುವ ಹುನ್ನಾರ ಬಯಲಿಗೆ ಬಂದಿದೆ. ಈ ದೇಶದ್ರೋಹಿ ಕೃತ್ಯದಲ್ಲಿ ದೇಶದ ಹಲವೆಡೆ ಮುಸ್ಲೀಂ ಯುವಕರಿಗೆ ತರಬೇತಿ ನೀಡುತ್ತಿದ್ದ ಮಾಜಿ ಪೋಲೀಸ್ ಅಧಿಕಾರಿಯು ಶಾಮೀಲಾಗಿರುವುದು ಬೆಳಕಿಗೆ ಬಂದಿದ್ದು, ಅತ್ಯಂತ ಕಳವಳಕಾರಿಯಾದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
Also read: ತಾಂತ್ರಿಕ ಕಾರಣಗಳಿಂದ ವಸತಿ ಯೋಜನೆ ಪರಿಹಾರ ವಿಳಂಬ: ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್
ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚಿನ ವಿಷಯವಾಗಿ ಯಾವುದೇ ಪ್ರತಿಪಕ್ಷದ ನಾಯಕರುಗಳು ಖಂಡಿಸದಿರುವುದು ಅತ್ಯಂತ ದುರದೃಷ್ಟಕರ. ದೇಶದ ಅಖಂಡತೆಗೆ ಧಕ್ಕೆ ತರುವಂತಹ ವಿಷಯ ಬಂದರೂ ಪ್ರತಿಪಕ್ಷಗಳು ಒಟ್ಟಾಗಿ ನಿಲ್ಲದೆ ಆಂತರಿಕ ರಾಜಕೀಯದಲ್ಲಿ ನಿರತವಾಗಿರುವುದು ಅತ್ಯಂತ ವಿಷಾದನೀಯ ಎಂದಿದ್ದಾರೆ.
ದೇಶ ಭಕ್ತ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಬಗ್ಗೆ ಪುಂಖಾನುಪುಂಖವಾಗಿ ದೂಷಿಸುವ ಸಿದ್ದರಾಮಯ್ಯನವರು ಜಾಣ ಮೌನವಹಿಸಿರುವುದು ಅವರ ಇಬ್ಬಂಗಿತನಕ್ಕೆ ಹಿಡಿದ ಸಾಕ್ಷಿಯಾಗಿದೆ ಎಂದವರು ಕಿಡಿ ಕಾರಿದ್ದಾರೆ.
ಸಮಾಜದಲ್ಲಿ ಕೋಮು ಸೌಹಾರ್ದತೆ, ಶಾಂತಿ-ಸಹಬಾಳ್ವೆಯ ಪಾಠ ಬರಿಯ ಹಿಂದೂಗಳಿಗೆ ಮಾತ್ರವಾಗಬಾರದು. ತಪ್ಪಿತಸ್ಥರಿಗೆ ಉಗ್ರವಾದ ಶಿಕ್ಷೆಯಾಗಬೇಕು ಹಾಗೂ ದೇಶ ವಿರೋಧಿ ಎಫ್’ಐ ಸಂಘಟನೆಯನ್ನು ಕೂಡಲೇ ನಿಷೇಧಿಸಬೇಕು ಎಂದು ಕಾಂತೇಶ್ ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post