ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಕೆನರಾ ಬ್ಯಾಂಕ್ ಶಾಖೆ ಉದ್ಘಾಟನೆಗೊಂಡಿರುವುದು ಬಹಳ ಉಪಯುಕ್ತಕಾರಿ ಹಾಗೂ ವಿಶ್ವವಿದ್ಯಾಲಯದ ದಿನನಿತ್ಯದ ವಹಿವಾಟಿಗೆ ಬ್ಯಾಂಕ್ ಅತ್ಯವಶ್ಯ ಎಂದು ಕುಲಪತಿ ಡಾ. ಜಗದೀಶ್ ಸಂತಸ ವ್ಯಕ್ತಪಡಿಸಿದರು
ಕೆಳದಿ ಶಿವಪ್ಪ ನಾಯಕ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಇರುವಕ್ಕಿಯಲ್ಲಿ ಕೆನರಾ ಬ್ಯಾಂಕ್ ನ 80ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹಳ ದಿವಸಗಳ ಬೇಡಿಕೆ ಈಡೇರಿದೆ ಎಂದರು.
ಈ ಭಾಗದಲ್ಲಿರುವ ರೈತರಿಗೂ ಸಾಲ ತೆಗೆದುಕೊಳ್ಳಲು ಹಾಗೂ ಇನ್ನಿತರೆ ವಹಿವಾಟಿಗೆ ಬಹಳ ಸಹಾಯವಾಗುತ್ತದೆ. ನಮ್ಮ ವಿಶ್ವವಿದ್ಯಾಲಯದಿಂದ ಈ ಶಾಖೆಯಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡಲಾಗುವುದು ಪರಸ್ಪರ ಸಹಕಾರದಿಂದ ಕೆಲಸವನ್ನು ಮಾಡೋಣ ಎಂದರು.
Also read: ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಹಿನ್ನೆಲೆ ಸೂಕ್ತ ಕ್ರಮಕ್ಕೆ ವಿಹಿಪ ಆಗ್ರಹ
ಕೆನರಾ ಬ್ಯಾಂಕ್ ನ ಜನರಲ್ ಮ್ಯಾನೇಜರ್ ರಾಮ ನಾಯಕ್ ಮಾತನಾಡಿ, ಕೆನರಾ ಬ್ಯಾಂಕ್ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಮನೆಯಲ್ಲಿ ಇದ್ದು ಎಲ್ಲಾ ವೈವಾಟನ್ನು ಡಿಜಿಟಲ್ ಬ್ಯಾಂಕಿಂಗ್ ಮೂಲಕ ನಡೆಸಬಹುದು. ಈ ಶಾಖೆಯಲ್ಲಿ ವ್ಯವಹರಿಸುವ ಎಲ್ಲ ಗ್ರಾಹಕರಿಗೆ ವಿಶೇಷ ಪ್ಯಾಕೇಜ್ ನೀಡಲಾಗುವುದು. ಹಾಗೂ ನಮ್ಮ ಬ್ಯಾಂಕಿನ ಸಂಸ್ಥಾಪಕರ ಆಶಯದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೆನರಾ ಬ್ಯಾಂಕಿನಿಂದ ಬ್ಯಾಂಕಿಂಗ್ ನ ಎಲ್ಲ ಸೌಲಭ್ಯಗಳು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ರೀಜನಲ್ ಮ್ಯಾನೇಜರ್ ಸಂದೀಪ್ ರಾವ್, ವಿಶ್ವ ವಿದ್ಯಾಲಯದ ರಿಜಿಸ್ಟರ್ ಡಾ. ಲೋಕೇಶ್, ಸರೋಜಾ ಬಾಯಿ, ಎನ್. ಶಿವಶಂಕರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post