ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬಿಸಿಎ ಅಂತಿಮ ವರ್ಷದ ಇಬ್ಬರು ವಿದ್ಯಾರ್ಥಿಗಳು ಪ್ರತಿಷ್ಠಿತ ಇನ್‌ಫರ್‌ಮೇಟಿಕ್ಸ್ ಡಿಜಿಟಲ್ ಸೊಲ್ಯು?ನ್ ಎಂಬ ಕಂಪನಿಗೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ಲೇಸ್‌ಮೆಂಟ್ ಆಫೀಸರ್ ಆಗಿರುವ ಅನಮೋಲ್ ತಿಳಿಸಿದ್ದಾರೆ.
ಬಿಸಿಎ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀ ಹಾಗೂ ಅಭಿ?ಕ್ ಎಂಬ ಇಬ್ಬರು ವಿದ್ಯಾರ್ಥಿಗಳು ಹೈದರಾಬಾದ್‌ನ ಕಂಪನಿ ನಡೆಸಿದ ಮೂರು ಹಂತಗಳ ಸಂದರ್ಶನ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿ ತಮ್ಮ ಆಯ್ಕೆ ಆದೇಶವನ್ನು ಪಡೆದಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾಕಾವೇರಿ ಮಾತನಾಡಿ, ವಿದ್ಯಾರ್ಥಿಗಳನ್ನು ವೃತ್ತಿಪರ ಹಾಗೂ ಸಮಾಜ ಮುಖಿಯಾಗಿ ಬೆಳೆಸುವುದೇ ಈ ಕಾಲೇಜಿನ ಗುರಿ. ಇದಕ್ಕೆ ಪೂರಕವಾದ ತರಬೇತಿಗಳನ್ನು ಹಾಗೂ ವಿವಿಧ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಈ ಕಾಲೇಜು ಒದಗಿಸುತ್ತದೆ. ಕಾಲೇಜಿನ ಬಿ.ಸಿ.ಎ.ವಿಭಾಗವು ಇದಕ್ಕಾಗಿ ಉತ್ತಮ ಉಪನ್ಯಾಸಕರನ್ನೂ ಒಳ್ಳೆಯ ಕಂಪ್ಯೂಟರ್ ಪ್ರಯೋಗಾಲಯ, ಗ್ರಂಥಾಲಯವನ್ನು ಹೊಂದಿದೆ. ಇದೆಲ್ಲದರ ಕಾರಣದಿಂದ ಈ ಇಬ್ಬರು ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀ ಹಾಗೂ ಅಭಿ?ಕ್ ಅತ್ಯಂತ ಹೆಚ್ಚಿನ ಶ್ರಮವಹಿಸಿ ಔದ್ಯೋಗಿಕ ಸಂದರ್ಶನದಲ್ಲಿ ಯಶಸ್ವಿಯಾಗಿದ್ದಾರೆ. ಅವರಿಗೆ ಉದ್ಯೋಗದ ಆದೇಶ ಈಗಾಗಲೇ ದೊರಕಿರುವುದು ಅತ್ಯಂತ ಸಂತಸದ ವಿಷಯ ಎಂದರು.

ಮಾನಸ ಟ್ರಸ್ಟ್‌ನ ನಿರ್ದೇಶಕರಾದ ಡಾ.ರಜನಿ ಎ ಪೈ ರವರು ‘ನಮ್ಮ ಸಂಸ್ಥೆಗೆ ಇದೊಂದು ಶ್ಲಾಘನೀಯ ಮಜಲು. ಈಗಾಗಲೇ ಸೈಕಾಲಜಿ ಸ್ನಾತಕೋತ್ತರ ವಿದ್ಯಾರ್ಥಿಗಳೆಲ್ಲರೂ ತಮ್ಮ ಅಂತಿಮ ಸೆಮಿಸ್ಟರ್‌ನಲ್ಲೇ ಉದ್ಯೋಗದ ಆದೇಶ ಪಡೆಯುತ್ತಿದ್ದಾರೆ. ಇದೀಗ ಬಿ.ಸಿ.ಎ ವಿದ್ಯಾರ್ಥಿಗಳಿಗೂ ಕಾಲೇಜು ಕ್ಯಾಂಪಸ್ ಸೆಲೆಕ್ಷನ್‌ಗೆ ಅವಕಾಶ ಮಾಡಿರುವುದು ಸಂತಸ ತಂದಿದೆ. ಇಬ್ಬರೂ ವಿದ್ಯಾರ್ಥಿಗಳಿಗೆ ಹಾಗೂ ಪ್ಲೇಸ್‌ಮೆಂಟ್ ಆಫೀಸರ್‌ಗೆ, ಉಪನ್ಯಾಸಕರೆಲ್ಲರಿಗೆ ಅವರು, ಟ್ರಸ್ಟ್‌ನ ಪರವಾಗಿ ಅಭಿನಂದಿಸಿದರು.
ಡಾ. ರಾಜೇಂದ್ರ ಚೆನ್ನಿ, ಪ್ರೊ. ರಾಮಚಂದ್ರ ಬಾಳಿಗ ರವರು ಈ ಸಾಧನೆಯು ರ್‍ಯಾಂಕ್ ಬಂದಷ್ಟು ಹರ್ಷ ತಂದಿದೆ. ವಿದ್ಯಾರ್ಥಿಗಳಾದ ಮೊಹಮ್ಮದ್ ಜಬೀ ಹಾಗೂ ಅಭಿ?ಕ್ ಮತ್ತು ಅವರಿಗೆ ತರಬೇತಿ ನೀಡಿದ ಅನಮೋಲ್, ವಿಭಾಗದ ಮುಖ್ಯಸ್ಥ ಮಂಗೇಶ್ ಪೈ ಮತ್ತು ಉಪನ್ಯಾಸಕರಿಗೆ ಅಭಿನಂದಿಸಿದರು. ವಿದ್ಯಾರ್ಥಿಗಳಿಗೆ ಈ ಕಾಲೇಜು ಉತ್ತಮ ವಾತಾವರಣ ಕಲ್ಪಿಸುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post