ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಮಹಿಳಾ ಬ್ಯೂಟಿಷಿಯನ್ಸ್ ಕೆಲಸಗಾರರಿಗೆ ಮತ್ತು ಮಾಲೀಕರಿಗೆ ಸರ್ಕಾರ ನೆರವು ನೀಡಬೇಕು ಎಂದು ಶಿವಮೊಗ್ಗ ಬ್ಯೂಟಿಷಿಯನ್ಸ್ ಅಸೋಸಿಯೇಷನ್ ಆಗ್ರಹಿಸಿದೆ.
ಕೋವಿಡ್‌ನ ಲಾಕ್‌ಡೌನ್ ಸಂದರ್ಭದಲ್ಲಿ ಮಹಿಳಾ ಬ್ಯೂಟಿಷಿಯನ್ಸ್‌ಗಳು ಕೂಡ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. ಬ್ಯೂಟಿಪಾರ್ಲರನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಇವರಿಗೆ ಈಗ ಕಳೆದ 2 ವರ್ಷಗಳಿಂದ ಜೀವನ ನಡೆಸುವುದೇ ಕಷ್ಟಕರವಾಗಿದೆ. ನಗರದಲ್ಲಿ ಸುಮಾರು 250ಕ್ಕೂ ಹೆಚ್ಚು ಮಹಿಳೆಯರು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಈಗ ಎಲ್ಲರೂ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಯಾವ ಅನುದಾನವು ನಮಗೆ ಸಿಗಲಿಲ್ಲ. ನಮಗೆ ಗುರುತಿನ ಚೀಟಿಯೂ ಇಲ್ಲ, ಬಾಡಿಗೆ ಕಟ್ಟಲು ಆಗುತ್ತಿಲ್ಲ ಮತ್ತು ಬ್ಯೂಟಿ ಪಾರ್ಲರ್‌ಗಾಗಿ ಖರೀದಿಸಿದ ವಸ್ತುಗಳು ಕೂಡ ಹಾಳಾಗಿವೆ. ಅಲ್ಲದೆ ಸಿಬ್ಬಂದಿಗಳು ಕೂಡ ತುಂಬಾ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರ ಕೂಡ ತಮ್ಮ ನೆರವಿಗೆ ಬರಬೇಕು. ನಮಗೂ ಪರಿಹಾರ ನೀಡಬೇಕು ಮತ್ತು ದಿನಸಿ ಕಿಟ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಬೇಕು ಅಲ್ಲದೆ ನಮಗೂ ಕೂಡ ದಿನಕ್ಕೆ 3 ಗಂಟೆಗಳ ಕಾಲವಾದರೂ ಅಂಗಡಿ ತೆರೆಯಲು ಅವಕಾಶ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.ಪ್ರಮುಖರಾದ ವಾಣಿ, ಎನ್. ನಾಗವೇಣಿ, ಟಿ.ಆರ್. ಭಾಗ್ಯ, ಪದ್ಮಾ, ಗೀತಾ ಎಸ್, ಅಪರ್ಣಾ ಮತ್ತಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post