ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೀದರ್ ಮತ್ತು ಮಂಗಳೂರಿನ ದರೋಡೆ ಪ್ರಕರಣಗಳು #Bidar-Mangalore Robbery Case ಮಾಸುವ ಮುನ್ನವೇ ಎಟಿಎಂ ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶಿವಮೊಗ್ಗದಲ್ಲಿ #Shivamogga ATM Robbery ನಡೆದಿದೆ.
ನಗರದ ನೆಹರು ರಸ್ತೆಯ ಎಟಿಎಂನಲ್ಲಿ ಭಾನುವಾರ ರಾತ್ರಿ 10.45ರ ಸುಮಾರಿನಲ್ಲಿ ಬೆನ್ನಿಗೆ ಬ್ಯಾಗ್, ತಲೆಗೆ ಟೋಪಿ ಧರಿಸಿ ಬಂದಿದ್ದ ವ್ಯಕ್ತಿಯೊಬ್ಬ ಎಟಿಎಂ ಯಂತ್ರ ಮುರಿಯಲು ಯತ್ನಿಸಿದ್ದಾನೆ ಆದರೆ ಸರಿಯಾದ ಸಮಯಕ್ಕೆ ಅಲಾರಾಂ ಟ್ರಿಗರ್ ಆದ ಕಾರಣ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ.

Also read: Bengaluru students made Karnataka proud on this Republic Day
ತಕ್ಷಣದಿಂದಲೇ ಕಾರ್ಯಪ್ರವೃತ್ತರಾದ ಕೋಟೆ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸಿದರು. ಕೆಲವೇ ಹೊತ್ತಿನಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಯುತ್ತಿದೆ. ಆರೋಪಿ ಬಿಹಾರ ಮೂಲದವನು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post