ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ – ಬೆಂಗಳೂರು ನಡುವಿನ ಇಂಡಿಗೋ ವಿಮಾನ #IndiGoFlight ಹಾರಾಟ ಮೇ 1ರಿಂದ ಸ್ಥಗಿತಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಹೌದು… ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಕಠಿಣ ಮಾರ್ಗಸೂಚಿ ಇಂಡಿಗೋ ಏರ್’ಲೈನ್ಸ್ #IndiGoAirlines ಸಂಸ್ಥೆಗೆ ಸಂಕಷ್ಟ ತಂದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ ಎನ್ನಲಾಗಿದೆ.
2025ರ ಜೂನ್ ತಿಂಗಳಿನಲ್ಲಿ ಅಹಮದಾಬಾದ್’ನಲ್ಲಿ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದ ನಂತರ ವಿಮಾನಗಳ ಸುರಕ್ಷತೆಯ ದೃಷ್ಠಿಯಿಂದ ಕಾರ್ಯಾಚರಣೆಗಾಗಿ ಡಿಜಿಸಿಎ #DGCA ಕೆಲವು ನಿಯಮಗಳನ್ನು ರೂಪಿಸಿದೆ.
ಹೊಸ ನಿಯಮಗಳ ಅನುಷ್ಠಾನದಿಂದಾಗಿ ಇಂಡಿಗೋದಲ್ಲಿ ಪೈಲಟ್’ಗಳ ಕೊರತೆಯಿರುವುದು ವಿಮಾನ ಕಾರ್ಯಾಚರಣೆಗೆ ಅಡ್ಡಿಯಾಗಿದೆ.
ಇಂಡಿಗೋ ಪ್ರಸ್ತುತ ಶಿವಮೊಗ್ಗ ಮತ್ತು ಬೆಂಗಳೂರು #Bengaluru ನಡುವೆ ಪ್ರತಿದಿನ ವಿಮಾನಗಳನ್ನು ಓಡಿಸುತ್ತಿದ್ದು, ಕಂಪನಿಯು ಮೂರು ತಿಂಗಳ ಅವಧಿಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಾಗಿ ವಿಮಾನ ನಿಲ್ದಾಣಕ್ಕೆ ತಿಳಿಸಿದೆ ಎಂದು ತಿಳಿದುಬಂದಿದೆ.
ಮೇ ಮಧ್ಯಭಾಗದಿಂದ ಮುಂಗಾರು ಕೂಡ ಪ್ರಾರಂಭವಾಗುವುದರಿಂದ, ಇದು ಆಫ್-ಸೀಸನ್ ಅವಧಿಯಾಗಿದ್ದು, ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗುವುದಿಲ್ಲ ಎನ್ನಲಾಗಿದೆ.
ಹಾಲಿ, ಇಂಡಿಗೋ ವಿಮಾನ ಮಧ್ಯಾಹ್ನ 1.30ಕ್ಕೆ ಬೆಂಗಳೂರಿನಿಂದ ಹೊರಟು 2.40ಕ್ಕೆ ಶಿವಮೊಗ್ಗ #Shivamogga ತಲುಪುತ್ತಿದೆ. ಮಧಾಹ್ನ 3 ಗಂಟೆಗೆ ಶಿವಮೊಗ್ಗದಿಂದ ಹೊರಟು 4.05ಕ್ಕೆ ಬೆಂಗಳೂರು ತಲುಪುತ್ತಿದೆ. ಮೇ 1ರಿಂದ ವಿಮಾನಯಾನ ರದ್ದುಗೊಳಿಸುತ್ತಿರುವುದರಿಂದ ಬುಕಿಂಗ್ ಕೂಡ ನಿಲ್ಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















