ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರಿಗೆ ಮತ್ತೆ ಮೂರು ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
ವೆಸ್ಟ್ ಬೆಂಗಾಲ್‌ನ ವಿಬ್ರನ್ಟ್ ಕಲರ್ ನ್ಯಾಷನಲ್ ಡಿಜಿಟಲ್ ಸೆರ್ಕೋಟ್ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯ ಡೈಲಿಲೈಫ್ ವಿಭಾಗದಲ್ಲಿ ಬೆಸ್ಟ್ ಸ್ಟೋರಿ ಅವಾರ್ಡ್ ಚಿನ್ನದ ಪದಕ ಹಾಗೂ ವಿ.ಸಿ.ಮೇರಿಟ್ ಅವಾರ್ಡ್ ಹಾಗೂ ರಾಷ್ಟ್ರೀಯ ಪಿಕ್ಚರ್‌ಸ್ಕ್ಯೂಬ್ ಆರ್ಟ್‌ಕ್ಲಬ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಪಿಎಸಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅಪರೂಪದ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ನಿಷ್ಣಾತರು, ಪಕ್ಷಿಗಳ ಚಲನವಲನವನ್ನು ಅತ್ಯಂತ ವ್ಯವದಾನದಿಂದ ಸೆರೆ ಹಿಡಿದು ನೂರಾರು ದಾಖಲೆ ಚಿತ್ರಗಳನ್ನು ನೀಡಿರುವುದು ಅವರ ಹಿರಿಮೆ. ಈಗಾಗಲೇ ಸಾಹಿತ್ಯ ಸಮ್ಮೇಳನ ಸೇರಿದಂತೆ ಹತ್ತಾರು ಕಾರ್ಯಕ್ರಮಗಳಲ್ಲಿ ಅವರ ಚಿತ್ರಗಳ ಪ್ರದರ್ಶನ ಜನಮೆಚ್ಚುಗೆಗೆ ಪಾತ್ರವಾಗಿದೆ.
ಅವರು ಕ್ಲಿಕ್ಕಿಸಿದ ಅಪರೂಪದ ಹಾಗೂ ಜೀವನ ವಿಸ್ಮಯ ಸಾರುವ ಪ್ರೇಮ ಸಂದೇಶದ ಚಿತ್ರ ಒಲ್ಡ್ ಎಜ್ ಲೈಫ್ (ಮುಪ್ಪಾಗದ ಪ್ರೀತಿ) ಗೆ ಈ ಬಹುಮಾನ ಲಭಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post