ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭದ್ರಾವತಿಯ ಹೊಸಮನೆಯ ಮುಖ್ಯ ರಸ್ತೆಯ ಕುವೆಂಪು ಬಡಾವಣೆಯಲ್ಲಿರುವ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಭ್ರಷ್ಟಚಾರಗಳು ನಡೆದಿದ್ದು, ಸೂಕ್ತ ತನಿಖೆ ನಡೆಸಬೇಕು ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಹಾಲಿ ಅಧ್ಯಕ್ಷ ಹೆಚ್.ಎಸ್. ಗುರುರಾಜ್‌ರಾವ್ ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳಿಗೆ ಶಿಕ್ಷಣ ದಕ್ಕಬೇಕು ಎಂಬ ಸೇವಾ ದೃಷ್ಟಿಯಿಂದ ನಾನು ಶ್ರೀಸ್ವಾಮಿವಿವೇಕಾನಂದ ಎಜುಕೇಷನ್ ಟ್ರಸ್ಟ್ ಸ್ಥಾಪಿಸಿ ಅದರ ಸಂಸ್ಥಾಪಕ ಅಧ್ಯಕ್ಷನಾಗಿ ಪ್ರೆöÊಮರಿ ಮತ್ತು ಹೈಸ್ಕೂಲ್ ವಿಭಾಗವನ್ನು ಸ್ಥಾಪಿಸಿದೆ. ಆದರೆ ಈಗ ಟ್ರಸ್ಟಿನ ಕೆಲವು ಹಾಲಿ ಸದಸ್ಯರು ಟ್ರಸ್ಟ್ ದುರುಪಯೋಗ ಪಡಿಸಿಕೊಂಡು ವಂಚನೆಗೆ ಇಳಿದಿದ್ದಾರೆ ಎಂದು ಆರೋಪಿಸಿದರು.

ಟ್ರಸ್ಟ್ ಅಧ್ಯಕ್ಷನಾಗಿದ್ದರೂ ಯಾವುದೇ ವಿಷಯವನ್ನು ನನ್ನ ಗಮನಕ್ಕೆ ತರುತ್ತಿಲ್ಲ, ಇದುವರೆಗೂ ಹಾಲಿ ಮತ್ತು ಮಾಜಿ ಶಾಸಕರುಗಳಿಂದ ಅನುದಾನ ಬಿಡುಗಡೆಯಾಗಿದೆ. ಆ ಲೆಕ್ಕವನ್ನು ಕೂಡ ಸರಿಯಾಗಿ ಕೊಟ್ಟಿಲ್ಲ. ಮಕ್ಕಳ ಶುಲ್ಕಕ್ಕೆ ರಶೀದಿಯನ್ನು ಕೊಡುತ್ತಿಲ್ಲ. ಟ್ರಸ್ಟ್’ಗೆ ಸಂಬಂಧಿಸಿದಂತೆ ಬಂದ ಅನುದಾನವನ್ನು ಯಾವ ಬ್ಯಾಂಕಿನಲ್ಲಿಯೂ ಡೆಪಾಸಿಟ್ ಮಾಡಿಲ್ಲ. ಇದುವರೆಗೂ ಲೆಕ್ಕಪತ್ರವನ್ನು ಕೂಡ ಆಡಿಟ್ ಮಾಡಿಸಿರುವುದಿಲ್ಲ ಎಂದು ದೂರಿದರು.

ಶಿಕ್ಷಣ ಇಲಾಖೆ, ಸಹಕಾರ ಇಲಾಖೆ ನೊಂದಣ ಇಲಾಖೆಯ ಅಧಿಕಾರಿಗಳು ನನ್ನ ದೂರನ್ನು ಗಮನಿಸಬೇಕು. ಮತ್ತು ಪತ್ರಿಕಾಗೋಷ್ಠಿಯ ಮೂಲಕ ನಾನು ಎಲ್ಲರನ್ನೂ ಒತ್ತಾಯಿಸುತ್ತಿದ್ದೇನೆ. ಸ್ವಾಮಿ ವಿವೇಕಾನಂದ ಟ್ರಸ್ಟ್’ನಲ್ಲಿ ಅವ್ಯವಹಾರ ಮಾಡುತ್ತಿರುವ ಮತ್ತು ಸುಮಾರು 8 ಕೋಟಿ ಆಸ್ತಿ ಹೊಂದಿರುವ ಟ್ರಸ್ಟ್ ಕಬಳಿಸುತ್ತಿರುವ ಹುನ್ನಾರದ ವಿರುದ್ಧ ಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















Discussion about this post