ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಒಂದೆಡೆ ಗ್ರಾಮ ಪಂಚಾಯ್ತಿಗೆ ಮತದಾನ ಆರಂಭವಾಗಿರುವ ನಡುವೆಯೇ ತಾಲೂಕಿನಲ್ಲಿ ಅಭ್ಯರ್ಥಿಯೊಬ್ಬರು ಬಹಿರಂಗವಾಗಿ, ಪೊಲೀಸರ ಎದುರಿಗೇ ಹಣ ಹಂಚಿರುವ ಘಟನೆ ನಡೆದಿದೆ.
ತಾಲೂಕಿನ ಕೂಡ್ಲಿಗೆರೆ ಪಂಚಾಯ್ತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಟ್ರಾಕ್ಟರ್ ಗುರುತಿನ ಕುಬೇರ್ ನಾಯಕ ಎಂಬ ಅಭ್ಯರ್ಥಿ ಮತದಾರರನ್ನು ಸೆಳೆಯಲು ಬಹಿರಂಗವಾಗಿಯೇ ಹಣ ಹಂಚಿಕೆ ಮಾಡುತ್ತಿದ್ದಾರೆ.
ಬಹಿರಂಗವಾಗಿ ಹಣ ಹಂಚುತ್ತಿರುವ ವೀಡಿಯೋ ಕಲ್ಪ ಮೀಡಿಯಾ ಹೌಸ್’ಗೆ ದೊರೆತಿದ್ದು, ಅಭ್ಯರ್ಥಿ ಮಹಿಳೆಯೊಬ್ಬರಿಗೆ ಹಣ ನೀಡುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ ಪ್ರತಿ ಮತಕ್ಕೆ 200 ರಿಂದ 500 ರೂ. ಹಣವನ್ನು ಹಂಚಿಕೆ ಮಾಡಲಾಗುತ್ತಿದ್ದು, ಇದು ಪೊಲೀಸರ ಎದುರಿಗೇ ನಡೆಯುತ್ತಿದ್ದೂ ಆರಕ್ಷಕರು ಕಂಡೂ ಕಾಣದಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮತದಾನದ ದಿನವೇ ಹೀಗೆ ಬಹಿರಂಗವಾಗಿ ಹಣ ಹಂಚಿಕೆ ಮಾಡುತ್ತಿರುವುದು ಹಾಗೂ ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗೆ ಧೋರಣೆಗೆ ಗ್ರಾಮಸ್ಥರು ಕಿಡಿ ಕಾರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post