ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಭದ್ರಾವತಿ |
ಹುಲಿಗಳ #Tiger ಸಂರಕ್ಷಣೆಗಾಗಿ ರಾಜ್ಯದಲ್ಲಿ ಕೈಗೊಂಡ ವಿವಿಧ ಉಪಕ್ರಮಗಳ ಫಲವಾಗಿ ರಾಜ್ಯದಲ್ಲಿ ವ್ಯಾಘ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.
ಹುಲಿಗಳ ಸಂರಕ್ಷಣೆಗಾಗಿ ರಾಜ್ಯದಲ್ಲಿ ಕೈಗೊಂಡ ವಿವಿಧ ಉಪಕ್ರಮಗಳ ಫಲವಾಗಿ ವ್ಯಾಘ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚು ಆಗಿದೆ ಎಂದು ವಿಶ್ಲೇಷಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿನ ವ್ಯಾಘ್ರಗಳ ಸಂಖ್ಯೆ
ರಾಜ್ಯ ಸರ್ಕಾರ ಪ್ರಕಟಿಸಿರುವ ಮಾಹಿತಿಯಂತೆ ಭದ್ರಾ ಹುಲಿ ಸಂರಕ್ಷಿತ #BhadraTigerReserve ವಲಯದಲ್ಲಿ ಒಟ್ಟು 26 ಹುಲಿಗಳಿವೆ. ಅಲ್ಲದೇ, ಭದ್ರಾವತಿ #Bhadravathi ವಿಭಾಗದಲ್ಲಿ 5 ಹಾಗೂ ಶಿವಮೊಗ್ಗ #Shivamogga ವಿಭಾಗದಲ್ಲಿ 1 ಹುಲಿ ಇದೆ ಎಂದು ಮಾಹಿತಿ ತಿಳಿಸಿದೆ.
ಏನಿದು ಕ್ಯಾಮೆರಾ ಟ್ರಾಪ್ಸ್?
ಅರಣ್ಯ ಪ್ರದೇಶದಲ್ಲಿ #Forest ಹುಲಿಗಳ ಗಣತಿ ನಡೆಸಲು ನಿಗದಿತ ಸ್ಥಳಗಳಲ್ಲಿ ಕ್ಯಾಮೆರಾ ಟ್ಯಾಪ್ #CameraTraps ನಡೆಸಲಾಗುತ್ತದೆ. ಅಂದರೆ, ವಿವಿಧ ಪ್ರದೇಶಗಳಲ್ಲಿ ಕ್ಯಾಮೆರಾ ಪಾಯಿಂಟ್ಸ್ ಇರಿಸಲಾಗುತ್ತದೆ. ಇದರಲ್ಲಿ ಹುಲಿಗಳ ಚಲನವಲನ ಪರಿಗಣಿಸಿ, ಡ್ಯೂಪ್ಲಿಕೇಟ್ ವೀಡಿಯೋಗಳನ್ನು ಹೊರತುಪಡಿಸಿ ಅಂತಿಮವಾಗಿ ಲೆಕ್ಕ ಹಾಕಲಾಗುತ್ತದೆ.
Also read: ಮಂತ್ರಾಲಯದಲ್ಲಿ ಭವ್ಯ ಶ್ರೀರಾಮ ಪುತ್ಥಳಿ ನಿರ್ಮಾಣಕ್ಕೆ ಅಮಿತ್ ಷಾ ಭೂಮಿ ಪೂಜೆ
ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಟ್ಟು 330, ಭದ್ರಾವತಿ ವಲಯದಲ್ಲಿ 121 ಹಾಗೂ ಶಿವಮೊಗ್ಗ ವನ್ಯಜೀವಿ ವಲಯದಲ್ಲಿ 182 ಕ್ಯಾಮೆರಾ ಪಾಯಿಂಟ್ಸ್’ಗಳು ಇರಿಸಲಾಗಿತ್ತು.
ರಾಜ್ಯದ ಎಲ್ಲೆಲ್ಲಿ ಎಷ್ಟು ಕ್ಯಾಮೆರಾ ಪಾಯಿಂಟ್ಸ್?
ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 612, ಭದ್ರಾದಲ್ಲಿ 330, ಬಿಆರ್’.ಯಲ್ಲಿ 288, ಕಾಳಿಯಲ್ಲಿ 448, ನಾಗರಹೊಳೆಯಲ್ಲಿ 502 ಕ್ಯಾಮರಾ ಪಾಯಿಂಟ್ ಅಳವಡಿಸಲಾಗಿತ್ತು. ಇದರಲ್ಲಿ 376 ಅನನ್ಯ (ವಿಶಿಷ್ಟ) ಹುಲಿಗಳು ಪತ್ತೆಯಾಗಿವೆ.
ಇದರಲ್ಲದೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ 80, ಬೆಳಗಾವಿ ವಿಭಾಗದಲ್ಲಿ 119, ಭದ್ರಾವತಿ ವಿಭಾಗದಲ್ಲಿ 121, ಕಾವೇರಿ ವನ್ಯಜೀವಿ ಧಾಮದಲ್ಲಿ 473, ಚಿಕ್ಕಮಗಳೂರು ವನ್ಯಜೀವಿ ಅರಣ್ಯದಲ್ಲಿ 41, ಹಳಿಯಾಳದಲ್ಲಿ 106, ಕಾರವಾರ ವಿಭಾಗದಲ್ಲಿ 135, ಕೊಪ್ಪ ವನ್ಯಜೀವಿಧಾಮದಲ್ಲಿ 50, ಕುದುರೇಮುಖ ವಿಭಾಗದಲ್ಲಿ 173, ಮಡಿಕೇರಿ (ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ) ವಿಭಾಗದಲ್ಲಿ 175, ಮಲೆ ಮಹದೇಶ್ವರ ಬೆಟ್ಟದಲ್ಲಿ 432, ಮೈಸೂರು #Mysore ವಿಭಾಗದಲ್ಲಿ 36, ಶಿವಮೊಗ್ಗ ವನ್ಯಜೀವಿ ಧಾಮದಲ್ಲಿ 182, ಶಿರಸಿ ವಿಭಾಗದಲ್ಲಿ 107, ವಿರಾಜಪೇಟೆ ವಿಭಾಗದಲ್ಲಿ 111, ಯಲ್ಲಾಪುರ #Yellapura ವಿಭಾಗದಲ್ಲಿ 94 ಸೇರಿ ರಾಜ್ಯದಲ್ಲಿ ಒಟ್ಟಾರೆ 4786 ಕ್ಯಾಮರಾ ಪಾಯಿಂಟ್ ಅಳವಡಿಸಲಾಗಿತ್ತು, ಈ ಎಲ್ಲ ಕ್ಯಾಮರಾಗಳಲ್ಲಿ 1 ಲಕ್ಷ 61 ಸಾವಿರದ 53 ರಾತ್ರಿಯ ವೇಳೆ ಸಂಚಾರದ ಚಿತ್ರೀಕರಣ ಪ್ರಯತ್ನ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post