ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಜಾಗೃತಿ ದಸರಾದ ಹಿನ್ನೆಲೆಯಲ್ಲಿ ನಗರಸಭೆ ಆಯೋಜಿಸಿದ್ದ ಅಡುಗೆ ಆರೋಗ್ಯ ಸ್ಪರ್ಧೆ ಯಶಸ್ವಿಯಾಗಿದ್ದು, ಮಹಿಳೆಯರು ಹಾಗೂ ಮಹಿಳಾ ಸಂಘಟನೆಗಳ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಭಂಟರ ಸಮುದಾಯ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಎಇಇ ರಂಗರಾಜ ಪುರೆ ಹಾಗೂ ಪೌರಾಯುಕ್ತ ಮನೋಹರ್ ಉದ್ಘಾಟಿಸಿದರು.
ಎಲ್ಲರ ಆರೋಗ್ಯ ಅವರ ಆಹಾರ ಪದ್ದತಿಯ ಮೇಲೆ ಅವಲಂಭಿತವಾಗಿದೆ. ಇದರೊಂದಿಗೆ ಅವರವರ ದೇಹ ಪ್ರಕೃತಿಗೆ ತಕ್ಕಂತೆ ನಿಯಮಿತ ವ್ಯಾಯಾಮವೂ ಸಹ ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ. ನಾವು ಏನು ಮಾಡಬೇಕು ಎಂಬುದನ್ನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ಮನೋಸಂಕಲ್ಪದಿಂದ ಎಲ್ಲವೂ ಸಾಧ್ಯ ಎಂದರು.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ಪ್ರಸ್ತಾವಿಕವಾಗಿ ಮಾತನಾಡಿದ ನಗರಸಭೆ ಆರ್’ಒ ರಾಜಕುಮಾರ್, ಪ್ರತಿವರ್ಷವೂ ನಗರಸಭೆಯಿಂದ ವೈಭವಯುತವಾಗಿ ದಸರಾ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್ ಸಂಕಷ್ಟ ಇದ್ದರೂ ಯಾವುದೇ ಕಾರಣಕ್ಕೂ ಸಾಂಪ್ರದಾಯಿಕ ಆಚರಣೆ ನಿಲ್ಲುವುದು ಬೇಡ ಎಂದು ಆಯುಕ್ತ ಮನೋಹರ್ ಅವರ ವಾದವಾಗಿತ್ತು. ಹೀಗಾಗಿ, ಈ ಬಾರಿಯ ದಸರಾವನ್ನು ಕೋವಿಡ್ ಜಾಗೃತಿ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಜಾಗೃತಿ ದಸರಾದ ಹಿನ್ನೆಲೆಯಲ್ಲಿ ಈ ಬಾರಿ ಆರೋಗ್ಯಕ್ಕೆ ಪೂರಕವಾಗಿ, ಪೋಷಕಾಂಶ ಹೆಚ್ಚಿಸಿ ಆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಡುಗೆಗಳನ್ನು ಮಾಡುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.
ತೀರ್ಪುಗಾರರಾಗಿ ಸುವರ್ಣಾ, ಉಮಾಮಣಿ ಪಾಲ್ಗೊಂಡಿದ್ದರು.
ನಗರಸಭೆ ಆಯುಕ್ತ ಮನೋಹರ್, ಆರ್’ಒ ರಾಜ್ ಕುಮಾರ್, ಲೆಕ್ಕ ಅಧೀಕ್ಷಕ ಮೊಹಮದ್ ಅಲಿ, ಭಂಟರ ಸಮುದಾಯ ಭವನದ ಪ್ರಮುಖ ಸುಬ್ಬಣ್ಣ, ನಗರಸಭೆಯ ಅಧಿಕಾರಿಗಳಾದ ಈಶ್ವರಪ್ಪ, ಶೃತಿ, ಕಚೇರಿ ವ್ಯವಸ್ಥಾಪಕಿ ಸುನಿತಾ ಕುಮಾರಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವೇಣುಗೋಪಾಲ್, ಆರೋಗ್ಯ ಶಾಖೆಯ ಸತೀಶ್, ನರಸಿಂಹಾಚಾರ್, ರಮಾಕಾಂತ್ ಸೇರಿದಂತೆ ಹಲವರು ಇದ್ದರು.
ವಿಜೇತರು:
ಮೊದಲ ಸ್ಥಾನ: ತಾಲೂಕು ಮಹಿಳಾ ಒಕ್ಕಲಿಗರ ವೇದಿಕೆ( ಅನ್ನಪೂರ್ಣ ಸತೀಶ್, ಲೋಹಿತಾ)
ದ್ವಿತೀಯ ಸ್ಥಾನ: ಐಶ್ವರ್ಯ ಸ್ವಸಹಾಯ ಮಹಿಳಾ ಸಂಘ(ರೂಪಾ, ರೇಖಾ)
ತೃತೀಯ ಸ್ಥಾನ: ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜ(ನಾಗರತ್ನ, ಸುಖನ್ಯ)
ಸ್ಪರ್ಧೆಯಲ್ಲಿ ಪಾಲ್ಗೊಂಡವರು:
ಮಹಿಳಾ ಸಮಾಜ, ಹಳೇನಗರ
ಶೋಭಾ ಗಂಗರಾಜ
ರೂಪ ಐಶ್ವರ್ಯ
ಮಂಜುಳ ಮಹಿಮಾ
ಕವಿತ ಸ್ನೇಹಮಿಲನ
ಅನು, ತಾಲೂಕು ಮಹಿಳಾ ಒಕ್ಕಲಿಗರ ವೇದಿಕೆ
ನಾಗರತ್ನ, ತಾಲೂಕು ವೀರಶೈವ ಲಿಂಗಾಯಿತ ಮಹಿಳಾ ಸಮಾಜ
ಸುಜಾತ, ಶ್ರೀ ಸಾಯಿ ಸ್ವಸಹಾಯ ಸಂಘ
ಲತಾಮೊರೆ ಶಿವಶಕ್ತಿ ಸ್ವಸಹಾಯ ಸಂಘ
ಲತಾ, ಮಾರುತಿ ನಗರ, ನಿಮಿಶಾಂಬ ಸ್ವಸಹಾಯ ಸಂಘ
ತಾಲೂಕು ವೀರಶೈವ ಸೇವಾ ಸಂಸ್ಥೆ
ಸುಮಿತ್ರ ನಾರಾಯಣ, ಧರ್ಮಸ್ಥಳ ಸಂಘ, ಕಾಗದ ನಗರ
ದಾದ್ರಿ, ಪೇಪರ್ ಟೌನ್
ಜಯಂತಿ ನಗರಸಭೆ
ದಿವ್ಯ ಸಂತೋಷ್
ಶೃತಿ ಸುನಿಲ್, ಸಿದ್ದೇಶ್ವರ ಸ್ವಸಹಾಯ ಸಂಘ
ಮಂಜುಳಾ ಮಲ್ಲಿಕಾರ್ಜುನ, ಗಗನ ಸ್ವಸಹಾಯ ಸಂಘ
ಏನೆಲ್ಲಾ ಆರೋಗ್ಯಕರ ಅಡುಗೆ ಮಾಡಲಾಗಿತ್ತು?
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ
ಮೊಳಕೆಕಾಳು ಕೋಸಂಬರಿ
ಬೀಟ್’ರೂಟ್ ಹಾಗೂ ಕ್ಯಾರೆಟ್ ಜ್ಯೂಸ್
ಶೇಂಗಾ ಲಾಡು
ಮಡಿಕೆ ಕಾಳು ಸಲಾಡ್
ಮೆಂತ್ಯೆ ಕಾಳಿನ ಮೊಳಕೆ
ಬೀಟ್ ರೂಟ್ ಹಸಿ ಸಲಾಡ್
ಬ್ರೆಡ್ ಸ್ಯಾಂಡ್’ವಿಚ್
ಕೋಸಂಬರಿ
ಮೊಳಕೆ ಹೆಸರು ಕಾಳು ಸಲಾಡ್
ಫ್ಯೂಟ್ ಸಲಾಡ್
ಸೌತೆಕಾಯಿ ಸಲಾಡ್
ಬಾದಾಮ್ ರೋಲ್
ಪಿಸ್ತಾ ರೋಲ್
ಚಾಕೋ ಚಿಪ್ಸ್
ಅವಲಕ್ಕಿ ಉಂಡೆ
ದೊಡ್ಡಪತ್ರೆ ಕಷಾಯ
ಮೂಲಂಗಿ ರಾಯಿತ
ಬೆಂಡೆಕಾಯಿ ಸಕ್ಕರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post