ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಬೊಮ್ಮನಕಟ್ಟೆ ಹೌಸಿಂಗ್ ಬೋರ್ಡ್ (ಕೆಹೆಚ್‌ಬಿ) ಕಾಲೋನಿಯಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಇಂದು ಇಲ್ಲಿನ ನಾಗರೀಕರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಸುಮಾರು 30 ವರ್ಷಗಳಿಂದ ನಾವು ಇಲ್ಲಿ ವಾಸ ಮಾಡುತ್ತಿದ್ದು, ಅಗತ್ಯ ಮೂಲಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಆದ್ದರಿಂದ ತಾವು ಖುದ್ದಾಗಿ ಭೇಟಿ ನೀಡಿ ಅಗತ್ಯ ನಾಗರೀಕ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂದು ವಿನಂತಿಸಿದರು.
3-4 ವರ್ಷಗಳಿಂದ ಉದ್ಯಾನವನ ಸ್ವಚ್ಛತೆ ಕಾಣದೆ ಗಿಡಗಂಟೆಗಳು ಆಳೆತ್ತರಕ್ಕೆ ಬೆಳೆದು, ವಿಷ ಜಂತುಗಳ ವಾಸಸ್ಥಾನವಾಗಿದೆ. ಉದ್ಯಾನವನದಲ್ಲಿ ಮಕ್ಕಳ ಆಟಕ್ಕಾಗಿ ಅಳವಡಿಸಿರುವ ಉಯ್ಯಾಲೆ, ಜಾರುಬಂಡೆ, ಎತ, ಗಿರಗಿಟ್ಟಲೇ ಮುಂತಾದ ಆಟಿಕಾ ವಸ್ತುಗಳು ಧೂಳು ಹಿಡಿದು ಹಾಳಾಗಿದೆ. ವಿಷಜಂತುಗಳಿಂದ ಕೂಡಿರುವ ಕಾರಣ ಅಪಾಯ ಹೆಚ್ಚಾಗಿದ್ದು, ಸ್ಥಳೀಯರಿಗೆ ಆತಂಕ ಮೂಡಿಸಿದೆ. ಆದ್ದರಿಂದ ಅತೀ ಶೀಘ್ರದಲ್ಲಿ ಉದ್ಯಾನವನ ಸ್ವಚ್ಚಗೊಳಿಸಿ ವಿಷಜಂತುಗಳಿಂದ ಮುಕ್ತಗೊಳಿಸಬೇಕು. ಹಾಗೂ ಮಕ್ಕಳ ಆಟಕ್ಕೆ ಇರುವಉಪಕರಣಗಳನ್ನು ದುರಸ್ತಿಗೊಳಿಸಿಕೊಡಬೇಕು ಎಂದು ಮನವಿ ಮಾಡಿದರು.
ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲ. ಹಾಲಿ ಚರಂಡಿಯು ದುರ್ವಾಸನೆಯಿಂದ ಕೂಡಿದ್ದು, ಆರೋಗ್ಯಕ್ಕೆ ಹಾನಿಕರವಾಗಿದ್ದು, ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ಕೋರಿದ್ದಾರೆ.
ಹಲವಾರು ವರ್ಷಗಳಿಂದ ಡಾಂಬರೀಕರಣ ಇಲ್ಲದೆ ರಸ್ತೆಗಳು ಬಹಳ ಹಾಳಾಗಿದ್ದು, ಓಡಾಟಕ್ಕೆ ತೊಂದ ಉಂಟಾಗಿದೆ. ಆದ್ದರಿಂದ ಸರ್ವಿಸ್ ರಸ್ತೆಗಳನ್ನು ಡಾಂಬರೀಕರಣಕ್ಕೆ ಮತ್ತು ಇತರ ಕಾಮಗಾರಿಗಳನ್ನು ಶೀಘ್ರ ಮಡಿಕೊಡುವಂತೆ ಮನವಿ ಮಾಡಿದರು.
ನಗರಸಭೆ ವತಿಯಿಂದ ಒಂದು ಕಚೇರಿ ತೆರೆದು ಕುಂದು ಕೊರತೆಗಳನ್ನು ಹೇಳಿಕೊಳ್ಳಲು ವ್ಯವಸ್ಥೆ ಮಾಡಿಕೊಡುವುದು. ನೀರಿನ ಕಂದಾಯ ಮತ್ತು ಆಸ್ತಿ ಕಂದಾಯ ಹಾಗೂ ಇತರೆ ಕಾರ್ಯಗಳಿಗೆ ಸಕಾಲದಲ್ಲಿ ಹಣ ಪಾವತಿಸಲು ಅನುವು ಮಾಡಿಕೊಡಬೇಕು. ಮತ್ತು ವಾಚನಾಲಯ ವ್ಯವಸ್ಥೆಗೆ ಒತ್ತಾಯಿಸಿದರು.
ಬೊಮ್ಮನಕಟ್ಟೆಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಇದ್ದು, ವಿದ್ಯಾರ್ಥಿಗಳಿಗೆ ಓಡಾಡಲು ಸಿಟಿ ಬಸ್ ವ್ಯವಸ್ಥೆ ಹಾಗೂ ನಗರಸಭೆ ವತಿಯಿಂದ ಉಜ್ಜನೀಪುರ ಪೇಪರ್‌ಟೌನ್ ಮಾದರಿಯಲ್ಲಿ ಇಲ್ಲಿಯೂ ಸಹ ಆರೋಗ್ಯ ಕೇಂದ್ರವನ್ನು ತೆರೆಯಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಲೋನಿಯ ನಾಗರೀಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post