ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ರಾಬರ್ಟ್ ಸಿನಿಮಾದ ಹೀರಾಯಿನ್ ಆಶಾ ಭಟ್ ಜಿಲ್ಲೆಯ ಭದ್ರಾವತಿಯವರು ಎಂಬುದೇ ಇಲ್ಲಿನ ಪ್ರಮುಖ ಹಾಗೂ ಖುಷಿಯಾದ ಸಂಗತಿ.
ಭದ್ರಾವತಿಯ ಸೈಂಟ್ ಚಾರ್ಲ್ಸ್ ಕಾನ್ವೆಂಟ್ ನಲ್ಲಿ ವಿದ್ಯಾಭ್ಯಾಸ ಆರಂಭಿಸಿದ ನಟಿ ಆಶಾಭಟ್ ನಂತರ ಮೂಡುಬಿದರೆ ಆಳ್ವಾಸ್ ಕಾಲೇಜಿಗೆ ಸೇರ್ಪಡೆಗೊಂಡರು. ವಿದ್ಯಾಭ್ಯಾಸದ ನಡುವೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ನಟಿ ದೆಹಲಿಯ ಪಥಸಂಚಲನದಲ್ಲಿ ಭಾಗವಹಿಸಿರುವ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
2009ರಲ್ಲಿ ಎನ್ಸಿಸಿಯಲ್ಲಿ ಪಾಲ್ಗೊಂಡು ಅನೇಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 2014 ರಲ್ಲಿ ಮಿಸ್ ಸುಫ್ರಾ ಸುಂದರಿಯಾಗಿ ಗುರುತಿಸಿಕೊಂಡರು. ಇನ್ನೊಂದು ವಿಷಯ ಏನು ಅಂದರೆ ಆಶಾಭಟ್ ಭದ್ರಾವತಿಯಲ್ಲಿ ಓದುತ್ತಿದ್ದ ವೇಳೆ ಅವರ ತಂದೆಯ ಮೆಡಿಕಲ್ ಲ್ಯಾಬ್ ಸೆಂಟರ್ ಇಲ್ಲಿನ ಹಾಲಪ್ಪ ವೃತ್ತದಲ್ಲಿತ್ತು.
ಸುಬ್ರಹ್ಮಣ್ಯ-ಶ್ಯಾಮಲ ಭಟ್ ದಂಪತಿಯ ದ್ವಿತೀಯಪುತ್ರಿ ಈ ಆಶಾ ಭಟ್. 2019ರಲ್ಲಿ ಬಿಡುಗಡೆಗೊಂಡ ಜಂಗ್ಲಿ ಸಿನಿಮಾದಲ್ಲಿ ದ್ವಿತೀಯ ನಾಯಕಿಯಾಗಿ ನಟಿಸಿದ್ದಾರೆ. ಈಗ ರಾಬರ್ಟ್ ಚಿತ್ರದಲ್ಲಿ ಡಿ ಬಾಸ್ ದರ್ಶನ್ ಅಭಿನಯದಲ್ಲಿ ನಾಯಕ ನಟಿಯಾಗಿ ನಟಿಸಿ ಇತಿಹಾಸ ಸೃಷ್ಠಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post