ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಭಾವಸಾರ ವಿಷನ್ ಇಂಡಿಯಾ ಪ್ರೇರಣಾ ಸಂಸ್ಥೆ ವತಿಯಿಂದ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ವಿಧಿಸಲಾಗಿರುವುದರಿಂದ ಮಧ್ಯಮವರ್ಗದವರು ಹಾಗೂ ತುಂಬಾ ತೊಂದರೆಗೊಳಗಾಗಿರುವ ಕೋವಿಡ್ ರೋಗಿಗಳಿಗೆ ನೋಡಿಕೊಳ್ಳುವ ಸಂಬಂಧಿಕರಿಗೆ ಊಟದ ಪ್ಯಾಕೆಟ್ ಮತ್ತು ನೀರಿನ ಬಾಟಲ್‌ಗಳನ್ನು ವಿತರಿಸಲಾಯಿತು.
ಮಾಜಿ ಗವರ್ನರ್ ಹಾಗೂ ಚಾರ್ಟರ್ ಅಧ್ಯಕ್ಷ ಎಮ್.ಎನ್. ವೆಂಕಟೇಶ್ ಮಾತನಾಡಿ, ಸಂಸ್ಥೆ ಸುಮಾರು ೨೦ ದಿನಗಳಿಂದ ನಿರಂತರವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಕೋವಿಡ್ ಸಂದರ್ಭದಲ್ಲಿ ರಕ್ತದಾನ ಶಿಬಿರ ಮತ್ತು ಕೋವಿಡ್ ರೋಗಿಗಳನ್ನು ನೋಡಿಕೊಳ್ಳುತ್ತಿರುವ ಸಂಬಂಧಿಕರಿಗೆ ಮತ್ತು ನಿರಾಶ್ರಿತರಿಗೆ ಊಟದ ಪ್ಯಾಕೆಟ್, ನೀರಿನ ಬಾಟಲಿಗಳನ್ನು ನೀಡುತ್ತಿದ್ದೇವೆ. ಇದಕ್ಕೆ ನಮ್ಮ ಸಂಘದ ಪರಿವಾರದ ಎಲ್ಲಾ ಸದಸ್ಯರು ಸಹಕರಿಸಿದ್ದು ಸಾಮಾಜಿಕ ಸೇವೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷರಾದ ಸುನಿಲ್ ಬೇದ್ರೆ ಮಾತನಾಡಿ, ನಮ್ಮ ಸಂಸ್ಥೆಯಿಂದ ಇನ್ನೂ ಹಲವಾರು ಸಮಾಜ ಸೇವೆಗೆ ಯೋಜನೆಯನ್ನು ಹಾಕಿಕೊಂಡಿರುತ್ತೇವೆ. ಈಗಿನ ಕೋವಿಡ್ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ಮಾಸ್ಕ್ ಮತ್ತು ನೀರಿನ ಬಾಟಲ್‌ಗಳನ್ನು ನೀಡುತ್ತಿದ್ದೇವೆ. ಆರೋಗ್ಯ ಇಲಾಖೆ, ಪೊಲೀಸ್ ಸಿಬ್ಬಂದಿಗಳು, ಡಾಕ್ಟರ್ಸ್ ಮತ್ತು ದಾದಿಯರು ಕೋವಿಡ್ ಸಂದರ್ಭದಲ್ಲಿ ನೀಡುತ್ತಿರುವ ಸೇವೆಯನ್ನು ಎಂದಿಗೂ ಮರೆಯುವ ಹಾಗಿಲ್ಲ ಅವರ ಸೇವೆಗೆ ನಾವು ಚಿರಋಣಿಯಾಗಿರುತ್ತೇವೆ. ಹಾಗೂ ನಮ್ಮ ಸಂಘದ ಸದಸ್ಯರು ಸೇವೆ ಮಾಡಲು ಸಿದ್ದರಿದ್ದೇವೆ ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ರೋ. ಜಿ. ವಿಜಯ್ ಕುಮಾರ್ ಮಾತನಾಡಿ ಸತತವಾಗಿ ೨೦ ದಿನಗಳಿಂದ ಊಟದ ಪ್ಯಾಕೆಟ್, ನೀರಿನ ಬಾಟಲ್ ಹಾಗೂ ಮಾಸ್ಕ್‌ಗಳನ್ನು ನೀಡುತ್ತಾ ಬರುತ್ತಿರುವುದು ಎಲ್ಲಾ ಸಂಘ ಸಂಸ್ಥೆಗಳಿಗೂ ಮಾದರಿಯಾಗಿದೆ. ಭಾವಸಾರ ವಿಷನ್ ಇಂಡಿಯಾ ಪ್ರೇರಣಾ ಸಂಸ್ಥೆಯು ಮಾಡುತ್ತಿರುವ ಸೇವೆಗೆ ಧನ್ಯವಾದ ತಿಳಿಸಿದರು. ಇನ್ನೂ ಹೆಚ್ಚಿನ ಸಂಘ-ಸಂಸ್ಥೆಗಳು ಇದೇರೀತಿ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ನಜರೆ, ವಿನಾಯಕ್ ದೂಜೋಡೆ, ಹರೀಶ್ ಕುಮಾರ್ ಲಾತೂರ್, ಪ್ರವೀಣ್ ಉತ್ತರ್ಕರ್, ಸಂದೀಪ್ ಉತ್ತರ್ಕರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post