ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಶಿಕಾರಿಪುರ ತಾಲೂಕು ತಾಳಗುಂದ ಮೂಲದ ಯುವ ನಿರ್ದೇಶಕ ಗಿರೀಶ್ ಮೂಲಿಮನಿ ನಿರ್ದೇಶನದ ಬಹು ನಿರೀಕ್ಷಿತ ‘ಭುವನಂ ಗಗನಂ’ ಚಿತ್ರ ಫೆ.14ರಂದು ರಾಜ್ಯಾಧ್ಯಂತ ತೆರೆಗೆ ಬರುತ್ತಿದೆ.
ಅಂದು ಪ್ರೇಮಿಗಳ ದಿನ, ಅಂದೇ ಈ ಚಿತ್ರ ತೆರೆಗೆ ಬರುವುದರ ಹಿಂದೆ ಕನ್ನಡ ಸಿನಿ ಪ್ರೇಕ್ಷಕರಿಗೆ ನವೀರಾದ ಪ್ರೇಮಕಥೆಯನ್ನು ಉಣಬಡಿಸುವ ಉದ್ದೇಶವೂ ಈ ಚಿತ್ರ ತಂಡಕ್ಕೆ ಇದ್ದಂತಿದೆ.
ಕನ್ನಡದ ಪ್ರತಿಭಾನ್ವಿತ ಯುವ ನಟರಾದ ಪ್ರಮೋದ್ ಹಾಗೂ ಪೃಥ್ವಿ ಅಂಬರ್ ನಟನೆಯ ಈ ಚಿತ್ರ ಹಲವು ಕಾರಣಕ್ಕೆ ಈಗಾಗಲೇ ಸಾಕಷ್ಟು ಸುದ್ದಿ ಮಾಡಿದೆ. ನಿರ್ಮಾಪಕ ಎಂ. ಮುನೇಗೌಡ ಅವರ ನಿರ್ಮಾಣದಲ್ಲಿ ಈ ಚಿತ್ರವು ಅದ್ದೂರಿಯಾಗಿ ಮೂಡಿಬಂದಿದ್ದು ಒಂದೆಡೆಯಾದರೆ, ಕಥೆ, ಚಿತ್ರಕಥೆ, ಸಂಭಾಷಣೆ, ತಾರಾಗಣದ ಜತೆಗೆ ವಿಶೇಷ ಸ್ಥಳಗಳಲ್ಲಿ ಈ ಚಿತ್ರ ಚಿತ್ರೀಕರಣಗೊಂಡಿದ್ದು ಕೂಡ ‘ಭುವನಂ ಗಗನಂ ‘ ತುಂಬಾ ವಿಶೇಷ ಎನಿಸಿದೆ.
Also read: ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ: ಶ್ರೀ ಪ್ರಸನ್ನನಾಥ ಸ್ವಾಮೀಜಿ
ಪ್ರಮೋದ್ ಹಾಗೂ ಪೃಥ್ವಿ ಅವರಿಗೆ ಚಿತ್ರದಲ್ಲಿ ರೆಚೆಲ್ ಡೇವಿಡ್ ಹಾಗೂ ಅಶ್ವಥಿ ನಟಿಸಿದ್ದಾರೆ. ಅವರೊಂದಿಗೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ತುಮ್ಮಿನಾಡು, ಸಿದ್ಲಿಂಗು ಶ್ರೀಧರ್, ಹರಿಣಿ, ಸ್ಪರ್ಶ ರೇಖಾ, ಪ್ರಜ್ವಲ್ ಶೆಟ್ಟಿ, ಚೇತನ್ ದುರ್ಗ ಮುಂತಾದವರು ತಾರಾಗಣದಲ್ಲಿದ್ದು, ಉದಯ್ ಲೀಲಾ ಕ್ಯಾಮೆರಾ ಕೈಚಳಕ, ಗುಮ್ಮಿನೇನಿ ವಿಜಯ್ ಅವರ ಮ್ಯೂಸಿಕ್ ಕಿಕ್, ಸುನೀಲ್ ಕಶ್ಯಪ್ ಸಂಕಲನ, ಗಿರೀಶ್ ಮೂಲಿಮನಿ, ಪ್ರಸನ್ನ ವಿ ಸಂಭಾಷಣೆ ಸಿನಿಮಾಕ್ಕಿದೆ.
ಕಥೆಯ ವಿಶೇಷ ಅಂದ್ರೆ, ಎರಡು ಮುಗ್ದ ಮನಸ್ಸುಗಳ ಪಯಣದ ಭುವನಂ ಗಗನಂ ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಗಿರೀಶ್ ಮೂಲಿಮನಿ ಒಂದೊಳ್ಳೆ ಕಥೆಯನ್ನು ಆಯ್ಕೆ ಮಾಡ್ಕೊಂಡು ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಚಿತ್ರದ ವಿಶೇಷತೆ ಕುರಿತು ಮಾತನಾಡುವ ನಿರ್ದೇಶಕ ಗಿರೀಶ್ ಮೂಲಿಮನಿ, ಭುವನಂ ಗಗನಂ ಸಿನಿಮಾ ಲವ್, ರೋಮ್ಯಾನ್ಸ್, ಫ್ಯಾಮಿಲಿ ಎಮೋಷನ್ ಕಥಾಹಂದರ ಸಿನಿಮಾವಾಗಿದ್ದು, ನಗರ, ಹಳ್ಳಿ ಎರಡು ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಕಥೆಯಾಗಿದ್ದು, ಕ್ಲಾಸ್ ಮಾಸ್ ಜತೆಗೆ ಫ್ಯಾಮಿಲಿ ಎಲಿಮೆಂಟ್ಸ್ ಚಿತ್ರದಲ್ಲಿವೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗಲಿದೆ ಎಂದು ಹೇಳುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post