ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ಮಹಿಳೆ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.
ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದಾಗಿ ಈ ಘಟನೆ ಸಂಭವಿಸಿದ್ದು ಬೈಕ್ ಹಿಂಬದಿ ಕುಳಿತಿದ್ದ ಷಹೀನಾ ಬಾನು (೫೮) ಸಾವನ್ನಪ್ಪಿದ್ದಾರೆ. ಸೈಯದ್ ಸಮಿಹುಲ್ಲಾ ಎಂಬುವವರು ತಮ್ಮ ತಾಯಿ ಷಹಿನಾ ಬಾನು ಇವರನ್ನು ತಮ್ಮ ಚಿಕ್ಕಮ್ಮನವರ ಮನೆ ರಾಮನಗರದಿಂದ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ಟ್ರಾಕ್ಟರ್ ಚಾಲಕನ ಮೇಲೆ ವಿನೋಬನಗರದಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post