ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಟ್ರಾಫಿಕ್ ಪೊಲೀಸ್ #Shivamogga Traffic Police ವೀಲ್ಹಿಂಗ್ #Wheeling ಶೂರರ ಮೇಲೆ ಖಾಕಿ ಕಣ್ಣಿಟ್ಟಿದ್ದು, ವಿಲ್ಹೀಂಗ್ ಮಾಡಿ ಸಿಕ್ಕಿಬಿದ್ದ ಓರ್ವ ಯುವಕನಿಗೆ ಕೋರ್ಟ್ ಮೂಲಕ ಐದು ಸಾವಿರ ರೂ. ದಂಡ ವಿಧಿಸಲಾಗಿದೆ.
ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ವಿಸಿಬಲ್ ಅಫೆನ್ಸ್ ಹೊಂದಿದ ವಾಹನಗಳನ್ನ ಅಡ್ಡಗಟ್ಟಿ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಯುವಕನೊಬ್ಬ ವೀಲ್ಹೀಂಗ್ ಮಾಡಿಕೊಂಡು ಬೈಕ್ ಓಡಿಸಿದ್ದಾನೆ. ಇದನ್ನ ಗಮನಿಸಿ, ಅತನ ಬೈಕ್ ಅಡ್ಡಗಟ್ಟಿದ ಪೊಲೀಸರು ದಾಖಲಾತಿ ಪರಿಶೀಲಿಸಿ ಪ್ರಕರಣ ದಾಖಲಿಸಿ, ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ನಿನ್ನೆ ದಿನ ಬೈಕ್ ಸವಾರನಿಗೆ ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
Also read: ಕುಂಭಮೇಳಕ್ಕೆ ಈಗಲೂ ಹೋಗುವ ಪ್ಲಾನ್ ಇದೆಯಾ? ಈ ನಗರದಿಂದ ಮೂರು ವಿಶೇಷ ರೈಲು ಹೊರಡಲಿದೆ
ಎಸ್‌ಪಿ ಮಿಥುನ್ ಕುಮಾರ್ ರೀಲ್ಸ್ ಪೋಸ್ಟ್ ವೈರಲ್
ಇನ್ನು ಇದೇ ವಿಚಾರದಲ್ಲಿ ಬೈಕ್ ವಿಲ್ಹೀಂಗ್ ಮಾಡುವುದು ತಪ್ಪು ಹಾಗೂ ಹಾಗೆ ಮಾಡಿದಲ್ಲಿ ದಂಡ ವಿಧಿಸಲಾಗುತ್ತದೆ ಮತ್ತು ಸುರಕ್ಷಿತವಾಗಿ ಬೈಕ್ ಚಲಾಯಿಸಿ ಎನ್ನುವ ಸಂದೇಶ ಹೊಂದಿದ ರೀಲ್ಸ್ ಎಡಿಟ್ ಮಾಡಿ ಎಸ್‌ಪಿ ಮಿಥುನ್ ಕುಮಾರ್‌ರವರ ಫೋಟೋದೊಂದಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಪೋಸ್ಟ್ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post