ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ಆತ್ಮ ನಿರ್ಭರ ಭಾರತ’ದ ಪೂರ್ವಭಾವಿ ಸಭೆಯನ್ನು ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷರಾದ ಕುಮಾರಿ ಅ. ಮಂಜುಳಾ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ಈ ಸಭೆಯನ್ನು ಉದ್ದೇಶಿಸಿ ರಾಜ್ಯದ್ಯಕ್ಷರದ ಕುಮಾರಿ ಸಿ. ಮಂಜುಳಾರವರು ಆತ್ಮ ನಿರ್ಭರ್ ಸ್ವದೇಶಿ ಉತ್ಪನ್ನಗಳನ್ನೇ ನಾವು ಹೆಚ್ಚು ಹೆಚ್ಚು ಬಳಸಬೇಕು ಸ್ವದೇಶಿ ಉತ್ಪನ್ನಗಳನ್ನು ಹೆಚ್ಚು ತಯಾರಿಸಬೇಕು ಉದಾಹರಣೆಗೆ ನಾವೇ ನಮಗೆ ತರಕಾರಿಗಳನ್ನು ಬೆಳೆಯುವುದು. ನಮ್ಮ ಕೈ ಮಗ್ಗದಲ್ಲಿ ತಯಾರಿಸಿದಂತ ಅಥವಾ ನೇಯ್ದ ಸೀರೆಗಳನ್ನೇ ಹೆಚ್ಚು ಉಪಯೋಗಿಸುವುದು ಖಾದಿ ಉಡುಪುಗಳನ್ನೇ ಜಾಸ್ತಿ ಧರಿಸುವುದು ಹೀಗೆ ಸ್ವದೇಶಿ ಉತ್ಪನ್ನಗಳಿಗೆ ಸ್ವಾವಲಂಬಿ ಬದುಕಿಗೆ ಹಾಗೂ ಆತ್ಮ ನಿರ್ಭರ ನಿಜವಾದ ಅರ್ಥ ಸರ್ವತ ಮುಖ ಅಭಿವೃದ್ಧಿಗೆ ಸಹಕಾರ ನೀಡಿ ಮೋದಿಜೀ ಕನಸು ನೆನಸು ಮಾಡುವಲ್ಲಿ ಸಫಲರಾಗಬೇಕು. ಹೆಣ್ಣು ಮಕ್ಕಳ ಅತ್ಯಾಚಾರ ಹಾಗೂ ಕೊಲೆ ನೆಡೆಯುತಿದೆ. ಅದಕ್ಕೆ ನಾವು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವಂತಹ ಕೆಲಸಗಳನ್ನು ಮಾಡಬೇಕಾಗಿದೆ ಎಂದರು.
ಈ ಸಭೆಯಲ್ಲಿ ಚರ್ಚಿಸಿದರು ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸ್ವರ್ಣ ಶಂಕರ್, ಜಿಲ್ಲಾ ಅಧ್ಯಕ್ಷ ಎಂ.ಕೆ. ಜಗದೀಶ್, ಜಿಲ್ಲಾ ಕೇವಲ ಪುಸ್ತಕದ ಬರವಣಿಗೆಯಲ್ಲಿ ನಮ್ಮ ಆತ್ಮ ನಿರ್ಬರದ ಬಗ್ಗೆ ಬರೆದುಕೊಳ್ಳುವುದಲ್ಲ ಅದನ್ನು ಬೂತ್ ಮಟ್ಟಕ್ಕೆ ತಲುಪಿಸಿ ಕಾರ್ಯಗತ ಮಾಡಬೇಕಾಗಿ ಜಿಲ್ಲಾ ಅಧ್ಯಕ್ಷರು ತಿಳಿಸಿದರು ಜಿಲ್ಲಾ ಪದಾಧಿಕಾರಿಗಳಾದ ನಾನಿರ್ಬರ ಸಂಚಾಲಕಿಯಾದ ಮಧುರ ಶಿವಾನಂದ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಮೋರ್ಚಾದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸೋಶಿಯಲ್ ಮೀಡಿಯಾ ಸದಸ್ಯೆಯರು ಚುನಾಯಿತ ಪ್ರತಿನಿಧಿಗಳು ಹಿರಿಯ ಮುಖಂಡರು ಪ್ರಮುಖ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















