ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಜಮ್ಮುವಿನಲ್ಲಿ ಯೋಧರಾಗಿ ಕಾರ್ಯನಿರ್ವಹಿಸುತ್ತಿರುವ, ಪ್ರಸ್ತುತ ರಜೆಯ ಮೇಲೆ ಶಿವಮೊಗ್ಗಕ್ಕೆ ಆಗಮಿಸಿರುವ ಪ್ರವೀಣ್ ಕುಮಾರ್ ಅವರಿಗೆ ಅವರ ಸ್ವಗೃಹದಲ್ಲಿ ಗೌರವ ಸಲ್ಲಿಸಲಾಯಿತು.


ಮಹಿಳಾ ಮೋರ್ಛಾ ನಗರಾಧ್ಯಕ್ಷೆ ಸುರೇಖ ಮುರಳೀಧರ್, ಪ್ರಧಾನ ಕಾರ್ಯದರ್ಶಿ ರಶ್ಮಿ ಶ್ರೀನಿವಾಸ್, ಆರತಿ ಪ್ರಕಾಶ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ರೇಣುಕಾ, ಮಾಜಿ ಮಹಾಪೌರರಾದ ಸುವರ್ಣ ಶಂಕರ್, ನಾಗವೇಣಿ, ಅನಿತಾ, ಉಮಾಮೂರ್ತಿ, ಯಶೊಧ, ವೀಣಾ, ಮಂಜುಳಾ ಪಾಂಡೆ, ಪ್ರತಿಮಾ, ರೇಖ, ವರಲಕ್ಷ್ಮಿ, ಸೌಭಾಗ್ಯ, ಮಹಾಲಕ್ಷ್ಮಿ ಮುಂತಾದ ಸದಸ್ಯರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















