Read - 2 minutes
ರಕ್ತದಾನ ಶ್ರೇಷ್ಠ ದಾನ, ಒಬ್ಬ ಆರೋಗ್ಯವಂತ ವ್ಯಕ್ತಿ ದಾನಮಾಡುವ ರಕ್ತದಿಂದ ಕನಿಷ್ಠ ಮೂರರಿಂದ ನಾಲ್ಕು ಜನ ಅನಾರೋಗ್ಯ ಪೀಡಿತರಿಗೆ, ತುರ್ತು ಸಂದರ್ಭದಲ್ಲಿ ಉಪಯೋಗವಾಗುತ್ತದೆ. ಆರೋಗ್ಯವಂತ ವ್ಯಕ್ತಿ ದಾನ ಮಾಡಿದ ರಕ್ತವು 24 ಗಂಟೆಗಳಲ್ಲಿ ದೇಹದಲ್ಲಿ ಪುನಹ ಉತ್ಪತ್ತಿಯಾಗುತ್ತದೆ. ಆದರೆ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಲು ಪುರುಷರಿಗೆ ಮೂರು ತಿಂಗಳು, ಮಹಿಳೆಯರಿಗೆ ನಾಲ್ಕರಿಂದ ಆರು ತಿಂಗಳು ಕಾಲಾವಕಾಶ ಬೇಕಾಗುತ್ತದೆ.
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ Puneeth Rajkumar ಸವಿ ನೆನಪಿನಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಸಂಸ್ಥೆಯಿಂದ ಏ. 27ರ ಬುಧವಾರ ಆದಿಚುಂಚನಗಿರಿ ಬಿಜಿಎಸ್ ಬಾಯ್ಸ್ ಹಾಸ್ಟೆಲ್ ಶರವತಿ ನಗರದಲ್ಲಿ ಬೃಹತ್ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳು ದೂರವಾಗುತ್ತದೆ. ಕೇವಲ 24 ಗಂಟೆಗಳಲ್ಲಿ 350 ಎಂಎಲ್ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ಮಾನಸಿಕವಾಗಿ ಧನಾತ್ಮಕ ಚಿಂತನೆ ಹೆಚ್ಚಾಗುತ್ತದೆ. ಒಂದು ಜೀವ ಉಳಿಸಿದ ಹೆಮ್ಮೆ ನಮ್ಮದಾಗುತ್ತದೆ. ಮಾನವ ದೇಹದಲ್ಲಿ ಮಾತ್ರ ರಕ್ತ ಉತ್ಪತ್ತಿಯಾಗುತ್ತದೆ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ.
ಜೆಸಿಐ ಶಿವಮೊಗ್ಗ ಶರಾವತಿ ಅವರು ಅಪ್ಪು ಸವಿನೆನಪಿನಲ್ಲಿ ನಡೆಸುತ್ತಿರುವ ರಕ್ತದಾನ ಶಿಬಿರದಲ್ಲಿ, ಜೆಸಿ ಸೌಮ್ಯ ಅರಳಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಜೆಸಿ ಎಂ ಶ್ರೀಕಾಂತ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಜೆಸಿ ಪುಷ್ಪ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮೆಗ್ಗಾನ್ ರಕ್ತನಿಧಿಯ ಹನುಮಂತಪ್ಪ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರೆ. ಜೆಸಿ ಜ್ಯೋತಿ ಅರಳಪ್ಪ ಸಂಸ್ಥಾಪಕ ಅಧ್ಯಕ್ಷರು ಮತ್ತು ಜೆಸಿ ಚಿರಂಜೀವಿ ಬಾಬು ಕಾರ್ಯಕ್ರಮದ ನಿರ್ದೇಶಕರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಕ್ತದಾನ ಮಾಡುವ ಮೂಲಕ ರಕ್ತಕ್ಕೆ ಯಾವುದೇ ಜಾತಿ ಭೇದ ಭಾವ ಇಲ್ಲ ಎಂಬ ಸಂದೇಶವನ್ನು ಸಾರಬೇಕಾಗಿದೆ ಎಂದು ಜೆಸಿಐ ಶಿವಮೊಗ್ಗ ಶರಾವತಿ ಯ ಅಧ್ಯಕ್ಷರಾದ ಜೆಸಿ ಸೌಮ್ಯ ಅರಳಪ್ಪ ಅವರು ರಕ್ತದಾನ ಶಿಬಿರಕ್ಕೆ ಜೆಸಿ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ, ಸಂಘ-ಸಂಸ್ಥೆ ಗಳಿಗೆ ಆಹ್ವಾನಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post