ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ರಕ್ತದಾನವು ಬಹಳ ಪ್ರಾಮುಖ್ಯತೆ ಪಡೆದಿದೆ. ಒಂದು ಜೀವದ ಉಳಿವಿಗೆ ರಕ್ತದಾನವು ಕಾರಣವಾಗಿದೆ. ಮನುಷ್ಯ ತಾಂತ್ರಿಕವಾಗಿ ಎಷ್ಟು ಮುಂದುವರಿದರೂ ಒಂದು ಹನಿ ರಕ್ತವನ್ನು ಅವನು ಉತ್ಪಾದಿಸಲಾರ ಎಂದು ಮೆಗ್ಗಾನ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಹೇಳಿದರು.
ನಗರದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಯುವ ರೆಡ್ ಕ್ರಾಸ್ ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ಸ್ ಮತ್ತು ರೆಂಜರ್ಸ್ ಘಟಕ ಹಾಗೂ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಮಾಡಿದಷ್ಟು ನಾವು ಆರೋಗ್ಯವಂತರಾಗಿರುತ್ತೇವೆ. ಅನಿಮಿಯಾದಿಂದ ಬಳಲುವ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ಈ ರಕ್ತವು ಒಂದು ವರದಾನವಾಗಿದೆ. ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಡಾ.ಎಂ.ಕೆ. ವೀಣಾ ಮಾತನಾಡಿ, ಸಹ್ಯಾದ್ರಿ ವಾಣಿಜ್ಯ ಕಾಲೇಜು ಪ್ರತಿವರ್ಷವೂ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಯುವಜನರು ರಕ್ತದಾನದ ಮಹತ್ವವನ್ನು ತಿಳಿಯುವುದು ಅವಶ್ಯ. ಮನುಷ್ಯರಿಗೆ ಹಲವು ರೀತಿಯಲ್ಲಿ ಉಪಕಾರವನ್ನು ಮಾಡಬಹುದು. ಅದರಲ್ಲೂ ರಕ್ತದಾನದ ಮೂಲಕ ಮಾಡುವ ಉಪಕಾರವು ಶ್ರೇಷ್ಟವಾದ ಮಾನವ ಧರ್ಮವಾಗಿದೆ. ಸಾವು ಮತ್ತು ಬದುಕಿನ ನಡುವೆ ಹೋರಾಡುವ ಎಷ್ಟು ವ್ಯಕ್ತಿಗಳಿಗೆ ರಕ್ತದಾನವು ಜೀವದಾನವನ್ನು ಮಾಡುತ್ತದೆ. ಇಂತಹ ಉತ್ತಮ ಕೆಲಸಗಳಲ್ಲಿ ನಮ್ಮ ಯುವ ಜನರು ತೊಡಗಿಕೊಳ್ಳಬೇಕಾದ ಅಗತ್ಯವಿದೆ” ಎಂದರು.
Also read: ಫೆ.27ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಫಿಕ್ಸ್: ಸಂಸದ ರಾಘವೇಂದ್ರ
ಪ್ರಾಧ್ಯಾಪಕ ಬಾಲಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಮೆಗ್ಗಾನ್ ಆಸ್ಪತ್ರೆಯ ವೈದ್ಯರಾದ ಡಾ.ವೀಣಾ ಎಸ್., ಪ್ರಾಧ್ಯಾಪಕರಾದ ಡಾ. ಸರಳ ಕೆ.ಎಸ್., ಡಾ. ಶಿವಮೂರ್ತಿ ಎ., ಡಾ ಶುಭಾ ಮರವಂತೆ, ಪರಶುರಾಮ ಎಂ., ಲೆಪ್ಟಿನೆಂಟ್ ಶಶಿರಾಜ್ ಯು, ಆದರ್ಶ ಎಂಪಿಎಂ, ಮಮತಾ ಆರ್ ಹಾಗೂ ವಿದ್ಯಾರ್ಥಿಗಳು ರಕ್ತದಾನದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post