ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿನ ಕಬ್ಬಿಣದ ಪ್ರಮಾಣವನ್ನು ಕಡಿಮೆಯಾಗಿ, ಇದರಿಂದ ಹೃದ್ರೋಗದ ಅಪಾಯವನ್ನು ತಡೆಯಬಹುದು ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಡಾ.ಎಸ್. ನಾಗೇಂದ್ರ ಹೇಳಿದ್ದಾರೆ.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ರಕ್ತನಿಧಿ ಕೇಂದ್ರ ಹಾಗೂ ಭಾರತೀಯ ಅರವಳಿಕೆ ತಜ್ಞರ ರಾಜ್ಯ ಮತ್ತು ಶಿವಮೊಗ್ಗ ಜಿಲ್ಲಾ ಘಟಕದ ಸಂಯುಕ್ತಾಶ್ರಯದಲ್ಲಿ ಮ್ಯಾಕ್ಸ್ ಆಸ್ಪತ್ರೆಯಲ್ಲಿ ವಿಶ್ವ ಅನಸ್ತೇಶಿಯಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ದಿನದಿಂದ ದಿನಕ್ಕೆ ಹೆಚ್ಚುವರಿ ಕಬ್ಬಿಣ ಕಬ್ಬಿಣದ ಸೇವನೆಯು ಕೆಲವರಿಗೆ ಒಳ್ಳೆಯದಲ್ಲ. ರಕ್ತದಾನ ಮಾಡುವ ಮೂಲಕ ನೀವು ನಿಮ್ಮ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡಬಹುದು ಮತ್ತು ನಿಮ್ಮ ದೇಹದಲ್ಲಿ ಹೊಸ ರಕ್ತದ ರಚನೆಗೆ ಸಹಾಯವಾಗುತ್ತದೆ ಎಂದರು.
Also read: ಗಮನಿಸಿ! ಧರ್ಮಸ್ಥಳ, ಸುಬ್ರಹ್ಮಣ್ಯ, ಉಡುಪಿ ಕೃಷ್ಣ ಮಠಕ್ಕೆ ತೆರಳುವವರಿಗೆ ಇಲ್ಲಿದೆ ಮಹತ್ವದ ಸೂಚನೆ
ನೀವು ರಕ್ತದಾನ ಮಾಡಲು ಮುಂದೆ ಬಂದಾಗ, ನಿಮ್ಮ ರಕ್ತದಿಂದ ಇತರರಿಗೆ ಸಹಾಯ ಮಾಡಬಹುದು. ಆದರೆ ಅದರೊಂದಿಗೆ ಉಚಿತ ಮಿನಿ-ಆರೋಗ್ಯ ಪರೀಕ್ಷೆ ಸಹ ಮಾಡಿಸಿದಂತಾಗುತ್ತದೆ. ದಾನ ಮಾಡುವ ಮೊದಲು ಸಾಮಾನ್ಯವಾಗಿ ರಕ್ತವನ್ನು ಪರೀಕ್ಷಿಸಲಾಗುತ್ತದೆ. ನಿಮ್ಮ ರಕ್ತದೊತ್ತಡ, ಹಿಮೋಗ್ಲೋಬಿನ್ ಮತ್ತು ನಾಡಿ ಪರೀಕ್ಷೆ ನಡೆಯಲಿದೆ ಎಂದರು.
ಐಎಸ್’ಎ ಶಿವಮೊಗ್ಗ ಅಧ್ಯಕ್ಷ ಡಾ.ಪಿ.ಟಿ. ಶಿವಾನಂದ್ ಅವರು ಮಾತನಾಡಿ, ರಕ್ತದಾನ ಮಾಡಿದ ನಂತರ, ನಿಮ್ಮ ರಕ್ತವನ್ನು ಕೆಂಪು ರಕ್ತ ಕಣಗಳು, ಪ್ಲೇಟ್ಲೆಟ್’ಗಳು ಮತ್ತು ಪ್ಲಾಸ್ಮಾಗಳಾಗಿ ವಿಂಗಡಿಸಲಾಗಿದೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಯಾರಿಗಾದರೂ ರಕ್ತ ವರ್ಗಾವಣೆ ಅಥವಾ ಪೂರಕಗಳು ಬೇಕಾಗಬಹುದು. ಆದ್ದರಿಂದ ಆ ಸಮಯದಲ್ಲಿ ನಿಮ್ಮ ರಕ್ತವನ್ನು ಅವರಿಗಾಗಿ ಬಳಸಬಹುದು. ನಿಮ್ಮ ಸಮಯ ಮತ್ತು ರಕ್ತವನ್ನು ಅಗತ್ಯವಿರುವವರಿಗೆ ದಾನ ಮಾಡುತ್ತಿದ್ದೀರಿ ಎಂದು ನಿಮಗೆ ತಿಳಿದಾಗ ಅದು ಶಾಂತಿಯನ್ನು ನೀಡುತ್ತದೆ ಎಂದರು.
ತಡಿಕೆಲ ಸುಬ್ಬಯ್ಯ ಟ್ರಸ್ಟ್’ನ ಡಾ. ಲತಾ ನಾಗೇಂದ್ರ, ಡಾ. ವಿನಯ ಶ್ರೀನಿವಾಸ್, ಶಿವಮೊಗ್ಗ ಐಎಸ್’ಎ ಕಾರ್ಯದರ್ಶಿ ಡಾ. ಅಶ್ವಿನಿ, ರಕ್ತನಿಧಿ ಅಧಿಕಾರಿ ಡಾ. ವೈಭವ್ ನಾಯಕ್ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post