ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಆಶ್ರಯ ಸಮಿತಿಯು ಹಿಂದೆ ಬೊಮ್ಮನ ಕಟ್ಟೆಯಲ್ಲಿ ನಿರ್ಮಿಸಿದ್ದ ಆಶ್ರಯ ನಿವೇಶನಗಳಲ್ಲಿ 20 ವರ್ಷ ಕಳೆದರು ಮನೆ ಕಟ್ಟಿಕೊಳ್ಳದಿರುವುದರ ಬಗ್ಗೆ ಆಕ್ಷೇಪಿಸಿ ಅವುಗಳನ್ನು ರದ್ದುಪಡಿಸಲು ತೀರ್ಮಾನಿಸಿತ್ತು. ಈಗ ಅಂತಿಮ ಹಂತದ ಮೂರು ತಿಂಗಳ ಕಾಲಾವಕಾಶ ನೀಡಲಾದರೂ ಸಹ 54 ನಿವೇಶನಗಳಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರೆ ಅವುಗಳನ್ನು ತೆರವುಗೊಳಿಸಲಾಗುತ್ತದೆ ಎಂದು ನಗರ ಆಶ್ರಯ ಸಮಿತಿ ಅಧ್ಯಕ್ಷ ಹೆಚ್. ಶಶಿಧರ್ ತಿಳಿಸಿದ್ದಾರೆ.
ಬೊಮ್ಮನಕಟ್ಟೆ ಎ ಬ್ಲಾಕ್‌ನ ನಿವೇಶನ ಸಂಖ್ಯೆ, 42, 55, 69, 70, 137, 148, 180, 185, 189, 199, 210, 212, 258, 262, 284, 303, 332, 336, 345, 355, 364, 369, 371, 372 390, 407, 419, 436, 438, 441, 459, 465, 468, 477, 485, ಬಿ ಬ್ಲಾಕ್ ನಿವೇಶನ ಸಂಖ್ಯೆ 222, 226, 282, ಡಿ ಬ್ಲಾಕ್‌ನ ನಿವೇಶನ ಸಂಖ್ಯೆ 56, 172, 307, 312, 313, 325, 379, 401, 426, 431, 432, 433, 447, ಹಾಗೂ ಇ ಬ್ಲಾಕ್‌ನ ನಿವೇಶನ ಸಂಖ್ಯೆ 177, 178, 179 ರಲ್ಲಿ ರೈತರಿಗೆ ನೀಡಿರುವ ನಿವೇಶನಗಳಲ್ಲಿ ಯಾರಾದರೂ ಅಕ್ರಮವಾಗಿ ಮನೆ ಕಟ್ಟಿಕೊಂಡಲ್ಲಿ ಅವುಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














Discussion about this post