ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಯಂ ತಪಾಸಣೆಯಿಂದ ಸ್ತನ ಕ್ಯಾನ್ಸರ್ ನ್ನು #Breast Cancer ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ತೀರ್ಥಹಳ್ಳಿ ಎಂಐ ಒ ಆಸ್ಪತ್ರೆಯ ತಜ್ಞೆ ಡಾ.ಭವ್ಯ ಹೇಳಿದರು.
ಅವರು ಶನಿವಾರ ಬೆಳಗ್ಗೆ ಶಿವಮೊಗ್ಗದ ಸಾಹಸ ಮತ್ತು ಸಂಸ್ಕøತಿ ಅಕಾಡೆಮಿ, ಮಥುರಾ ಪ್ಯಾರಡೈಸ್ ರಜತೋತ್ಸವ ಸಮಿತಿ, ತೀರ್ಥಹಳ್ಳಿಯ ಎಂಐಒ ಆಸ್ಪತ್ರೆ ಮತ್ತು ಸಾಗರದ ಶಾರದಾ ಮಹಿಳಾ ಮಂಡಳಿ ಶೃಂಗೇರಿ ಮಠ, ಇವರ ಸಂಯುಕ್ತ ಆಶ್ರಯದಲ್ಲಿ ತೀರ್ಥಹಳ್ಳಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಆರೋಗ್ಯ ಹಾಗೂ ಕ್ಯಾನ್ಸರ್ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷತೆಯ ಮೂಲಕ ವಿವರಿಸಿ ಮಾತನಾಡಿದರು.

ಮಹಿಳೆಯರು ಕನ್ನಡಿ ಮುಂದೆ ನಿಂತು ತಮ್ಮ ಸ್ತನಗಳನ್ನು ತಾವೇ ತಪಾಸಣೆ ಮಾಡಿಕೊಂಡು ಗಂಟುಗಳ ಪತ್ತೆ ಹಚ್ಚಿ ಬೇಗನೆ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಎಂದರು.
Also read: ಸೊರಬ | ಜ.12ರಂದು ಸಾಮಾನ್ಯ ಆರೋಗ್ಯ, ಕ್ಯಾನ್ಸರ್ ಅರಿವು ಕಾರ್ಯಕ್ರಮ
ಇದೇ ಸಂದರ್ಭದಲ್ಲಿ ಸಾಗರದ ಶೃಂಗೇರಿ ಮಠದ ಶಾರದ ಮಂಡಳಿಯ ಮುಖ್ಯಸ್ಥೆ ಹಾಗು ಸಮಾಜ ಸೇವೆಕಿ ಸಹೃದಯಿ ರಾಜಶ್ರೀ ಅಶ್ವಿನಿ ಕುಮಾರ್ ಅವರನ್ನು ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನಿತರಾಗಿ ಮಾತನಾಡಿದ ರಾಜಶ್ರೀ ಅಶ್ವಿನಿ ಕುಮಾರ್ ಅವರು ಕ್ಯಾನ್ಸರ್ ಬಗ್ಗೆ ಮಹಿಳೆಯರು ತಲ್ಲಣ ಗೊಳ್ಳುವ ಕಾಲವಿತ್ತು ,ಈಗ ಇದಕ್ಕೆ ವಿವಿಧ ರೀತಿಯ ಆಧುನಿಕ ಚಿಕಿತ್ಸಾ ಪದ್ಧತಿಗಳಿವೆ .ರೋಗ ಬೇಗ ಪತ್ತೆ ಹಚ್ಚುವುದರಿಂದ ಕ್ಯಾನ್ಸರನ್ನು ಗುಣಪಡಿಸಬಹುದು ಈ ನಿಟ್ಟಿನಲ್ಲಿ ಮಹತ್ವದ ವಿಷಯಗಳನ್ನು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆಎಂದರು.

ಕಾರ್ಯಕ್ರಮದಲ್ಲಿ ಸಾಗರದ ಪ್ರಮುಖರಾದ ಮಹಾಬಲೇಶ್ವರ, ಗೋಪಿ ದೀಕ್ಷಿತ್, ತರುಣೋದಯ ಘಟಕದ ಶ್ರಿವತ್ಸಾ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದಿವ್ಯ ಜ್ಯೋತಿ ಎನ್, ಅಂಕುಶ್ ಸೇರಿದಂತೆ ಹಲವರಿದ್ದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post