ಶಿವಮೊಗ್ಗ: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ವ್ಯಕ್ತಿಗಳ ಪರವಾಗಿ ಕರಪತ್ರ/ಪೋಸ್ಟರ್‌ಗಳನ್ನು ಮುದ್ರಿಸುವ ಸಂದರ್ಭದಲ್ಲಿ ಮುದ್ರಣಾಲಯ, ಪ್ರಕಾಶಕರ ಹೆಸರು, ವಿಳಾಸ ಹಾಗೂ ಮುದ್ರಿತ ಕರಪತ್ರ/ಪೋಸ್ಟರ್‌ಗಳ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಯಾವುದೇ ವ್ಯಕ್ತಿಯು ತನ್ನ ಅಥವಾ ಪಕ್ಷದ ಕರಪತ್ರ/ಪೋಸ್ಟರ್‌ಗಳನ್ನು ಮುದ್ರಿಸಲು ತಂದಾಗ ಆ ವ್ಯಕ್ತಿಯ ಆಧಾರ್‌ಕಾರ್ಡ್/ಗುರುತಿನ ಚೀಟಿ ಹಾಗೂ ಆ ವ್ಯಕ್ತಿಗೆ ವೈಯುಕ್ತಿಕ ಪರಿಚಯವಿರುವ ಇಬ್ಬರ ಸಾಕ್ಷಿಯೊಂದಿಗೆ ಚುನಾವಣಾ ಆಯೋಗವು ನಿರ್ದಿಷ್ಠ ಪಡಿಸಿದ ನಮೂನೆಯಲ್ಲಿ ವ್ಯಕ್ತಿಯ ಘೋಷಣಾ ಪತ್ರವನ್ನು ಪಡೆದು ನಂತರ ಕರಪತ್ರ/ಪೋಸ್ಟರ್‌ಗಳನ್ನು ಮುದ್ರಿಸುವುದು ಹಾಗೂ ಮುದ್ರಣವಾದ 3 ದಿನದೊಳಗೆ ಆ ಕರಪತ್ರ/ಪೋಸ್ಟರ್‌ಗಳ 4 ಪ್ರತಿಗಳನ್ನು ಹಾಗೂ ವ್ಯಕ್ತಿಯು ನೀಡಿರುವ ಘೋಷಣಾ ಪತ್ರವನ್ನು ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ಸಲ್ಲಿಸುವುದು. ಯಾವುದೇ ಕರಪತ್ರ/ಪೋಸ್ಟರ್‌ಗಳಲ್ಲಿ ಜಾತಿ, ಲಿಂಗಭೇದ, ಭಾಷೆ ಮತ್ತು ವೈಯುಕ್ತಿಕ ಚಾರಿತ್ರ್ಯ ಹರಣದಂತಹ ಮಾಹಿತಿಗಳನ್ನು ಪ್ರಕಟಿಸಬಾರದು ಎಂದವರು ತಿಳಿಸಿದ್ದಾರೆ.
ಈ ಸೂಚನೆಗಳನ್ನು ಉಲ್ಲಂಘಿಸುವುದು ಚುನಾವಣಾ ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನಿನ ಅನ್ವಯ 6 ತಿಂಗಳ ಜೈಲು ಶಿಕ್ಷೆ ಅಥವಾ ರೂ. 2,000/- ದಂಡ ಅಥವಾ ಎರಡನ್ನು ವಿಧಿಸಬಹುದಾಗಿದ್ದು, ಎಲ್ಲಾ ಪ್ರಕಾಶಕರು, ಫ್ಲೆಕ್ಸ್ ಹಾಗೂ ಮುದ್ರಣಾಲಯದ ಮಾಲೀಕರು ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
(ವರದಿ: ಡಾ.ಸುಧೀಂದ್ರ)
Discussion about this post