ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಖಿಲ ಭಾರತ 6ನೇ ಪೆಂಕಾಕ್ ಸಿಲಾಟ್ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿದ್ಯಾರ್ಥಿನಿ ದೀಪಿಕಾ ಸುಣರ್ಗಾ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಕಂಚಿನ ಪದಕ ಪಡೆದು ರಾಜ್ಯಕ್ಕೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಇತ್ತೀಚೆಗೆ ಗೋವಾದ ಮನೋಹರ್ ಪರಿಕ್ಕರ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಪೆಂಕಾಕ್ ಸಿಲಾಟ್ ಫೆಡರೇಷನ್ ಸ್ಪೋರ್ಟ್ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ವಿವಿಧ ಕ್ರೀಡಾ ಸಂಸ್ಥೆಯ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಸ್ಪರ್ಧೆಯಲ್ಲಿ ಸೊರಬ ತಾಲೂಕಿನ ಆನವಟ್ಟಿಯ ವಿದ್ಯಾರ್ಥಿನಿ ದೀಪಿಕಾ ಸುಣಗಾರ್ 46-50 ಕೆಜಿ ಬಾಲಕಿಯರ ಟ್ಯಾಡಿಂಗ್ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾಳೆ.
ಈಕೆಯ ಸಾಧನೆಗೆ ಆನವಟ್ಟಿಯ ಎವರಾನ್ ಇಂಟರ್’ನ್ಯಾಶನಲ್ ರೆಸಿಡೆನ್ಸಿಯಲ್ ಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ಕಾರ್ತಿಕ್ ಸಾಹುಕಾರ್, ಜಿಲ್ಲಾ ಪೆಂಕಾಕ್ ಸಿಲಾಟ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ವಿ. ನಾಯ್ಡು, ತರಬೇತುದಾರ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಜಿ. ಭಟ್ ಅಭಿನಂದಿಸಿದ್ದಾರೆ.
Also read: ಬಳ್ಳಾರಿ ಗ್ರಾಪಂ ಉಪಚುನಾವಣೆ ದಿನಾಂಕ ಪ್ರಕಟ: ಫೆ.14 ನಾಮಪತ್ರ ಸಲ್ಲಿಸಲು ಕೊನೆಯ ದಿನ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















