ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೆಗ್ಗಾನ್ ನರ್ಸ್ ಕ್ವಾಟ್ರರ್ಸ್ನಲ್ಲಿ ಈ ಬಾರಿ ವಿಶಿಷ್ಟವಾಗಿ ಗಣೇಶೋತ್ಸವ Ganeshothsava ಆಚರಿಸಲಾಗುತ್ತಿದ್ದು, ಮೆಗ್ಗಾನ್ MecGann ಶ್ರೀ ಆರೋಗ್ಯ ಗಣಪತಿ ಪ್ರತಿಷ್ಠಾಪಿಸಲಾಗಿದೆ.
ಕಳೆದ ಹತ್ತು ವರ್ಷಗಳಿಂದ ಇಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಪ್ರತಿ ವರ್ಷ ಕೇವಲ ಅನ್ನ ಸಂತರ್ಪಣೆ ಮಾಡಲಾಗುತ್ತಿತ್ತು. ಮೂರು ವರ್ಷಗಳಿಂದ ಕ್ವಾಟ್ರರ್ಸ್‌ನಲ್ಲಿ ಮಹಿಳೆಯರು, ಮಕ್ಕಳಿಗೆ ವಿಶೇಷ ಕ್ರೀಡಾಕೂಟ, ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಮಾಡಲಾಗುತ್ತಿದೆ. ಆದರೆ, ಈ ಬಾರಿ ಕ್ವಾಟ್ರಸ್‌ನ ಬ್ರರ‍್ಸ್ಗಳು ಮತ್ತು ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಗಳು ರಕ್ತದಾನ ಮಾಡುವ ಮೂಲಕ ವೈಶಿಷ್ಟ್ಯ ಮೆರೆದಿದ್ದು, ಗಣೇಶೋತ್ಸವದಲ್ಲಿ ನಿಜವಾದ ಆರೋಗ್ಯೋತ್ಸವ ಮೆರೆದಿದ್ದಾರೆ.

Also read: ಸನಾತನ ಧರ್ಮದ ವಿರುದ್ಧ ಹೇಳಿಕೆ ಹಿನ್ನೆಲೆ: ಡಿಎಂಕೆ ನಾಯಕ ಉದಯ ನಿಧಿ ಸ್ಟಾಲಿನ್‌ಗೆ ಸುಪ್ರೀಂ ನೋಟಿಸ್
ಸಿಮ್ಸ್ನ SIMS ನಿರ್ದೇಶಕ ವಿರೂಪಾಕ್ಷಪ್ಪ ಅವರ ಮಾರ್ಗದರ್ಶನದಲ್ಲಿ ನಡೆದ ರಕ್ತದಾನ ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಜನ್ ಡಾ. ಸಿದ್ದನಗೌಡ ಪಾಟೀಲ್, ಶುಶ್ರೂಷಕ ಅಧೀಕ್ಷಕಿ ಅನ್ನಪೂರ್ಣ ಹೆಚ್.ಟಿ. ಉಪಸ್ಥಿತರಿದ್ದರು.

ಸೆ.24ರ ಭಾನುವಾರ ಗಣಹೋಮ, ಅನ್ನಸಂತರ್ಪಣೆಯ ನಂತರ ಸಂಜೆ 5.30ಕ್ಕೆ ರಾಜಬೀದಿ ಉತ್ಸವ ನಡೆಸಿ ಮೆಗ್ಗಾನ್ ಶ್ರೀ ಆರೋಗ್ಯ ಗಣಪತಿ ವಿಸರ್ಜನೆ ಮಾಡಲಾಗುವುದು. ಸಮಸ್ತ ಭಕ್ತಾದಿಗಳು ಪಾಲ್ಗೊಳ್ಳುವಂತೆ ಗಣೇಶೋತ್ಸವ ಸಮಿತಿ ಕೋರಿದೆ.











Discussion about this post