ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸನಾತನ ಧರ್ಮವನ್ನು ನಾಶ ಮಾಡಬೇಕು ಎಂಬ ಆಘಾತಕಾರಿ ಹೇಳಿಕೆ ನೀಡಿರುವ ತಮಿಳುನಾಡು ಡಿಎಂಕೆ ಮುಖಂಡ, ತಮಿಳುನಾಡು ಸಚಿವ ಉದಯ ನಿಧಿ ಸ್ಟಾಲಿನ್‌ಗೆ Udayanidhi Stalin ಸುಪ್ರೀಂ ಕೋರ್ಟ್ Supreme Court ನೊಟೀಸ್ ಜಾರಿ ಮಾಡಿದೆ.
ಈ ಕುರಿತಂತೆ ಬಿ. ಜಗನ್ನಾಥ್ ಅವರ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ವಿಚಾರಣೆ ನ್ಯಾಯಾಧೀಶರಾದ ಅನಿರುದ್ಧ ಬೋಸ್ ಹಾಗೂ ಬೇಲಾ ಎಮ್. ತ್ರಿವೇದಿ ಅವರಿದ್ದ ಪೀಠ ಸ್ಟಾಲಿನ್‌ಗೆ ನೊಟೀಸ್ ಜಾರಿ ಮಾಡಿದೆ. ಅಲ್ಲದೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚನೆ ನೀಡಿದೆ.
ತಮಿಳುನಾಡು ಸಚಿವರು ಆಗಿರುವ ಉದಯನಿಧಿ ಸ್ಟಾಲಿನ್ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ನಮ್ಮ ದೇಶದಲ್ಲಿ ಸಾಮಾಜಿಕ ನ್ಯಾಯ ಸಂಪೂರ್ಣವಾಗಿ ಸಿಗಬೇಕಾದರೆ ಸನಾತನ ಧರ್ಮವನ್ನು ನಾಶ ಮಾಡಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ದೇಶದಾದ್ಯಂತ ಬಾರಿ ವಿರೋಧಕ್ಕೆ ಕಾರಣವಾಗಿದ್ದು, ಸ್ಟಾಲಿನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
Also read: ಸುಪ್ರೀಂ ಕೋರ್ಟ್ ಗೆ ತುರ್ತಾಗಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿ: ಹೆಚ್ಡಿಕೆ ಆಗ್ರಹ
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಖ್ಯಾತ ಹಿರಿಯ ವಕೀಲ ಶೇಷಾದ್ರಿ ನಾಯ್ಡು, ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ. ಈ ಧರ್ಮ (ಸನಾತನ) ಒಳ್ಳೆಯದಲ್ಲ ಇದಕ್ಕೆ ಮಾದರಿಯಾಗಿ ಬೇರೆ ಧರ್ಮಗಳನ್ನು ಅನುಸರಿಸಿ ಎಂದು ಶಾಲಾ ಮಕ್ಕಳಿಗೆ ಹೇಳಿರುವುದು ಸಹ ದಾಖಲಾಗಿದೆ. ಇದು ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುವ ಜೊತೆಯಲ್ಲಿ ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದೇವೇಳೆ ಸ್ಟಾಲಿನ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಉತ್ತರ ಪ್ರದೇಶದ ರಾಮಪುರ ಎಂಬಲ್ಲಿ ದೂರು ದಾಖಲಾಗಿದೆ. ಭಾವನೆಗಳಿಗೆ ದಕ್ಕೆ ತಂದಿರುವುದು ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುವ ಹೇಳಿಕೆ ನೀಡಿರುವ ಆರೋಪದಲ್ಲಿ ಸೆಕ್ಷನ್ ಹಾಗೂ ಎರಡು ಕೋಮುಗಳ ನಡುವೆ ದ್ವೇಷ ತರುವಂತಹ ಹೇಳಿಕೆ ನೀಡಿರುವ ಸೆಕ್ಷನ್ 153(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post