ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇದು ಕರ್ನಾಟಕ ಮತ್ತು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹೊಂದಿದ ಬಜೆಟ್ ಎಂದು ಹೇಳಿದರೆ ತಪ್ಪಾಗಲಾರದು ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ D S Arun ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವಾಗಿ ಮಧ್ಯಮ ವರ್ಗದವರು, ಮಹಿಳೆಯರು ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಪಂಗಡಗಳು ಸಮಾಜದ ಎಲ್ಲ ವರ್ಗದವರನ್ನು ಗಮನದಲ್ಲಿರಿಸಿಕೊಂಡು ವಿತ್ತಯ ಶಿಸ್ತನ್ನು ಎಲ್ಲೂ ನಿರ್ಲಕ್ಷಿಸದೆ ಲೆಕ್ಕಾಚಾರದ ನೀತಿ ಪಾಲಿಸಿದ್ದಾರೆ. ಎರಡನೆಯ ಪೂರ್ಣ ಅವಧಿಯ ಆಯ ಪತ್ರವನ್ನು ವಿತ್ತ ಸಚಿವರು ಅಮೃತ ಕಾಲದಲ್ಲಿ ಮಂಡಿಸಿ ದೇಶದ ಗಮನ ಸೆಳೆದರು. ಕರ್ನಾಟಕದ ಬರಪೀಡಿತ ಕೇಂದ್ರ ಪ್ರದೇಶಕ್ಕೆ 5300 ಕೋಟಿ ರೂ ನೆರವು ಬಹಳ ಸ್ವಾಗತನಿಯ ಎಂದು ಹೇಳಿದ್ದಾರೆ.
ಮೂಲಸೌಕರ್ಯ ಕ್ಷೇತ್ರದಲ್ಲಿ 10 ಲಕ್ಷ ಕೋಟಿ ಬಂಡವಾಳ ಹೂಡಿಕೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡಿದ್ದು, ಮನೆಮನೆಗೆ ನಳ್ಳಿ ನೀರು (ಹರ್ ಘರ್ ಜಲ್) ಯೋಜನೆಯ ವೇಗವರ್ಧನೆಗೆ ಕಾರಣ ಆಗಲಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ನಂತರವೂ ಭಾರತವು ತನ್ನ ಆರ್ಥಿಕತೆಯ ವೇಗದಿಂದಾಗಿ ಜಗತ್ತಿನ ಗಮನ ಸೆಳೆದಿದೆ. ಯುವ ಉದ್ಯಮಿಗಳು, ಕೃಷಿ ಸ್ಟಾರ್ಟಪ್‍ಗಳಿಗೆ ಒತ್ತು ಕೊಟ್ಟಿದ್ದು, 38,800 ಶಿಕ್ಷಕರನ್ನು ನೇಮಿಸಿಕೊಳ್ಳಲು ಏಕಲವಯ ಮಾದರಿಯ ಶಾಲೆಗಳ ಘೋಷಣೆ ಸ್ವಾಗತಾರ್ಹ ಎಂದಿದ್ದಾರೆ.
5G ಸೇವೆಗಳನ್ನು ಬಳಸಿಕೊಂಡು ಅಪ್ಲಿಕೇಶನ್ ಅನ್ನು ಅಭಿವೃದ್ಧಿಗೊಳಿಸಲು 100 ಲ್ಯಾಬ್ ಗಳನ್ನು ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಸ್ಥಾಪಿಸಲಾಗುವುದು. ಇದು ಮುಂದೆ ಬರುವ ಪರ್ವಕಾಲವನ್ನು ಸೂಚಿಸುವ ಬಜೆಟ್ ಎಂದು ಡಿ.ಎಸ್.ಅರುಣ್ ವಿಶ್ಲೇಷಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post